ಈಗಾಗಲೇ ಪೊಲೀಸರು ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಆರೋಪಿಗಳು ಓಡಾಡಿದ್ದ ಜಾಗಗಳಲ್ಲಿ ಮಹಜರ್, ಸಿಸಿಟಿವಿ ಫೂಟೇಜ್, ಎಲ್ಲಾ ಆರೋಪಿಗಳ ಮೊಬೈಲ್ ಫೋನ್ ಚೆಕ್, ಡೇಟಾಗಳ ರಿಟ್ರೀವ್ ಸೇರಿದಂತೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಈ ವೇಳೆ ಪೊಲೀಸರಿಗೆ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಸ್ವಂತ ಹೆಸರಿನ ಸಿಮ್ ಬದಲು ಬೇರೊಂದು ಹೆಸರಿನಲ್ಲಿರೋ ಸಿಮ್ ಬಳಸಿದ್ದು ಯಾಕೆ? ಈ ಸಿಮ್ ಯಾರದ್ದು ಅನ್ನೋದನ್ನ ತಿಳಿದುಕೊಳ್ಳೋದಷ್ಟೇ ಬಾಕಿ ಇದೆ. ಹೀಗಾಗಿ ಪೊಲೀಸರು ಸಿಮ್ ಮೂಲ ಹುಡುಕಲು ಮುಂದಾಗಿದ್ದಾರೆ.
ಆರೋಪಿಗಳು ಓಡಾಡಿದ್ದ ಜಾಗಗಳಲ್ಲಿ ಮಹಜರ್ ಆಯ್ತು.. ಸಿಸಿಟಿವಿ ಆಯ್ತು.. ಎಲ್ಲಾ ಆರೋಪಿಗಳ ಮೊಬೈಲ್ ಫೋನ್ ಚೆಕ್ ಮಾಡಿದ್ದಾಯ್ತು.. ರಿಟ್ರೀವ್ ಮಾಡಿದ್ದಾಯ್ತು. ಈ ವೇಳೆ ಪೊಲೀಸರಿಗೆ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಸ್ವಂತ ಹೆಸರಿನ ಸಿಮ್ ಬದಲು ಬೇರೊಂದು ಹೆಸರಿನಲ್ಲಿರೋ ಸಿಮ್ ಬಳಸಿದ್ದು ಯಾಕೆ? ಈ ಸಿಮ್ ಯಾರದ್ದು ಅನ್ನೋದನ್ನ ತಿಳಿದುಕೊಳ್ಳೋದಷ್ಟೇ ಬಾಕಿ ಇದೆ.
ದರ್ಶನ್ ಹೆಸರಿನಲ್ಲಿ ಸಿಮ್ ಖರೀದಿ ಮಾಡಿದ್ದ ವ್ಯಕ್ತಿಯೂ ಕೂಡ ಮತ್ತೊಂದು ಸಿಮ್ ಖರೀದಿಸಿದ್ದ ಇದ್ರಿಂದ ಆತನನ್ನ ಪತ್ತೆ ಹಚ್ಚೋಕೆ ಸುಲಭವಾಗಿದ್ದು. ಆತನಿಂದ ಹೇಳಿಕೆ ಪಡೆಯಲಾಗಿದೆ. ಆದ್ರೆ ಆತ ಯಾರು ಅನ್ನೋ ಸುಳಿವನ್ನ ಪೊಲೀಸರು ಬಿಟ್ಟುಕೊಟ್ಟಿಲ್ಲ.