ಕೆಲ ಸಮಯದ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ಸಮಂತಾ ಮತ್ತೆ ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಟ್ಟಿದ್ದಾರೆ. ಸ್ಯಾಮ್ ಸದ್ಯ ‘ಸಿಟಾಡೆಲ್ ಹನಿ ಬನಿ’ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ತಮ್ಮ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದಲ್ಲಿ ಎದುರಿಸಿದ ಏರಿಳಿತಗಳನ್ನು ಹೇಗೆ ನಿಭಾಯಿಸಿದರು ಎಂಬುದನ್ನು ತಿಳಿಸಿದ್ದಾರೆ.
ಸಂದರ್ಶನದಲ್ಲಿ ಭಾಗಿಯಾಗಿದ್ದ ನಟಿಗೆ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನದಲ್ಲಿನ ಏರಿಳಿತಗಳನ್ನು ಹೇಗೆ ಎದುರಿಸುತ್ತೀರಿ ಎಂದು ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ನಟಿ ನಾನು ಸೋಲನ್ನು ಒಪ್ಪಿಕೊಳ್ತೀನಿ. ಆದರೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ನಾನು ಮತ್ತೆ ಗಟ್ಟಿಯಾಗಿ ಹಿಂತಿರುಗುತ್ತೇನೆ ಎಂದಿದ್ದಾರೆ.
ನಾನು ಈ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳಬೇಕಿತ್ತು. ಅದೇನೆಂದರೆ, ನಾನು ಗೌರವಿಸುವ ವ್ಯಕ್ತಿಯಿಂದ ಅದ್ಭುತವಾದ ಮಾತುಗಳನ್ನು ಕೇಳಿದ್ದೇನೆ. ನಿಮಗೆ ತೊಂದರೆಯಾಗುವುದರಲ್ಲಿ ನಿಮ್ಮ ಭವಿಷ್ಯ ಕಂಡುಕೊಳ್ಳುತ್ತೀರಿ. ಯಾವುದೇ ಸಮಸ್ಯೆ ಎದುರಾದರೂ ನಮಗೆ ಮುಂದಿನ ದಾರಿ ತಿಳಿಯುತ್ತದೆ ಎಂದು ಹೇಳಿದರು. ಏನೇ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಇದ್ದೇ ಇರುತ್ತದೆ ಎಂಬರ್ಥದಲ್ಲಿ ನಟಿ ಮಾತನಾಡಿದ್ದಾರೆ.
ಸಮಂತಾ ವರುಣ್ ಧವನ್ ಜೊತೆಗಿನ ‘ಸಿಟಾಡೆಲ್’ ವೆಬ್ ಸರಣಿ ಇದೇ ನವೆಂಬರ್ 7ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಇದು ಸಮಂತಾ ನಟನೆಯ ಬಾಲಿವುಡ್ನ 2ನೇ ವೆಬ್ ಸಿರೀಸ್ ಆಗಿದೆ.