ಮೆಗಾಸ್ಟಾರ್ ಕುಟುಂಬದ ಕುಡಿ , ಟಾಲಿವುಡ್ ನಟಿ ನಿಹಾರಿಕಾ ಕೊನಿಡೆಲಾ ಇತ್ತೀಚೆಗೆ ಪತಿಯಿಂದ ದೂರವಾಗಿದ್ದಾರೆ. ಟಾಲಿವುಡ್ ಗೆ ನಟಿಯಾಗಿ ಎಂಟ್ರಿಕೊಟ್ಟ ನಿಹಾರಿಕಾಗೆ ಅದು ಕೈ ಹಿಡಿಯಲಿಲ್ಲ. ಹೀಗಾಗಿ ಇದೀಗ ನಿರ್ಮಾಪಕರಿಯಾಗಿ ಹೊಸ ಇನ್ನಿಂಗ್ಸ್ ಶುರುಮಾಡಿದ್ದಾರೆ. ಈ ಮಧ್ಯೆ ಪತಿಯಿಂದ ದೂರವಾಗಿರೋ ನಿಹಾರಿಕಾಗೆ ಅಣ್ಣನ ಸ್ನೇಹಿತನ ಮೇಲೆ ಪ್ರೀತಿ ಹುಟ್ಟಿಕೊಂಡಿದೆ.
ನಿಹಾರಿಕಾ ಸದ್ಯ ನಿರ್ಮಾಪಕಿಯಾಗಿಯೂ ಸದ್ದು ಮಾಡುತ್ತಿದ್ದಾರೆ. ಸದ್ಯ ನಟಿಯ ನಿರ್ಮಾಣದ ‘ಕಮಿಟಿ ಕುರ್ರಾಲು’ ರಿಲೀಸ್ಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಚಾರ ಕಾರ್ಯದ ವೇಳೆ, ಅಣ್ಣನ ಗೆಳೆಯನ ಮೇಲಿನ ಪ್ರೀತಿಯ ಬಗ್ಗೆ ನಿಹಾರಿಕಾ ಮಾತನಾಡಿದ್ದಾರೆ.
ನಾಯಕಿಯಾಗಿ ನಿಹಾರಿಕಾಗೆ ಸಕ್ಸಸ್ ಸಿಗಲಿಲ್ಲ. ಬಳಿಕ ದಾಂಪತ್ಯ ಜೀವನ ಕೂಡ ಅವರ ಕೈಹಿಡಿಯಲಿಲ್ಲ. ಈಗ ನಿರ್ಮಾಪಕಿಯಾಗಿ ಟಾಲಿವುಡ್ನಲ್ಲಿ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ಡಿವೋರ್ಸ್ ಬಳಿಕ ಪ್ರೀತಿಯ ಬಗ್ಗೆನಿಹಾರಿಕಾ ಆಡಿರುವ ಮಾತು ಈಗ ವೈರಲ್ ಆಗಿದೆ.
ಸಂದರ್ಶನವೊಂದರಲ್ಲಿ ನಟಿಗೆ ಮಹೇಶ್ ಬಾಬು, ಎನ್ಟಿಆರ್, ಪ್ರಭಾಸ್, ಇವರಲ್ಲಿ ಯಾರನ್ನು ಇಷ್ಟಪಡುತ್ತೀರಿ ಎಂದು ನಿರೂಪಕಿ ಕೇಳಿದ್ದಾರೆ. ಅದಕ್ಕೆ ಕೊಂಚವೂ ಯೋಚಿಸದೆ ಪ್ರಭಾಸ್ ಎಂದು ಹೇಳಿದರು. ನಾನು ಪ್ರಭಾಸ್ರನ್ನು ಇಷ್ಟಪಡುತ್ತೇನೆ. ಅವರ ಹಾಸ್ಯ ನನಗಿಷ್ಟ ಎಂದು ನಟಿ ಹೇಳಿದ್ದು ಸದ್ಯ ಈ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ.