ಬೆಂಗಳೂರು: ಕೋರಮಂಗಲದಲ್ಲಿ ಪಿಎಸ್ಐ ಪುಟ್ಟಸ್ವಾಮಿ ಮನೆಯಲ್ಲಿ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಪತ್ನಿ ಕೈ ಕಾಲು ಕಟ್ಟಿ 12 ಲಕ್ಷ ಹಣ ರಾಬರಿ ಮಾಡಲಾಗಿದೆ ಎಂದು FIR ದಾಖಲಾಗಿತ್ತು. ಆದ್ರೆ ಈ ರಾಬರಿ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರ ಈ ನಡೆಯಿಂದ ಪಿಎಸ್ಐ ಮನೆಯಲ್ಲಿ ಕಳ್ಳತನವಾಗಿದ್ದು 12 ಲಕ್ಷ ಮಾತ್ರನಾ ಅಥವಾ 12 ಲಕ್ಷಕ್ಕೂ ಅಧಿಕ ಹಣ ಕಳತನವಾಗಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ.
12 ಲಕ್ಷಕ್ಕಿಂತ ಹೆಚ್ಚಿನ ಹಣ ಇದ್ದಿದ್ದೇ ಆದರೆ ಯಾರಿಗೆ ಸೇರಿದ್ದು? ರಾಜಕಾರಣಿಯದ್ದಾ? ಪೊಲೀಸ್ ಅಧಿಕಾರಿಯದ್ದಾ? ಅಥವಾ ಉದ್ಯಮಿಗಳದ್ದಾ? ಎಂಬ ಮಾಹಿತಿ ನೀಡಲು ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿರುವುದು ಯಾಕೆ? ಪ್ರಕರಣ ದಾಖಲಾಗಿ 20 ದಿನ ಕಳೆದರೂ ಕೋರಮಂಗಲ ಪೊಲೀಸರ ಮೌನವೇಕೆ? ಲಕ್ಷ ಲಕ್ಷ ಹಣದಲ್ಲಿ ಯಾರದ್ದೆಲ್ಲ ಪಾಲಿದೆ? ಎಂಬ ಪ್ರಶ್ನೆ ಉದ್ಭವವಾಗಿದೆ.
ಇನ್ನೂವರೆಗು ಕಳ್ಳನನ್ನು ಪತ್ತೆ ಮಾಡಿಲ್ಲ ಯಾಕೆ? ಕೋರಮಂಗಲ ಪೊಲೀಸರ ಮೇಲೆಯೇ ಹಲವು ಅನುಮಾನ ಮೂಡಿವೆ. ಹಣ ಸಂಬಂಧಿಕರಿಗೆ ನೀಡಿ ಕಳ್ಳತನ ನಾಟಕವಾಡಿದರಾ ಪಿಎಸ್ಐ ಕುಟುಂಬಸ್ಥರು? ಪ್ರಕರಣದ ಸತ್ಯಾಸತ್ಯತೆಯನ್ನು ಕೋರಮಂಗಲ ಪೊಲೀಸರು ಹೊರ ಹಾಕುತ್ತಿಲ್ಲ. ಸಿಸಿಟಿವಿ ದೃಶ್ಯ ಪರಿಶೀಲನೆ ವೇಳೆ ಯಾರ ಸುಳಿವು ಇಲ್ಲ. ಪ್ರಕರಣದ ಮಾಹಿತಿ ಹಂಚಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರೆಲ್ಲರು ಸೇರಿಕೊಂಡು ನಾಟಕ ಮಾಡಿದ್ರಾ? ಎಂಬ ಚರ್ಚೆ ಪೊಲೀಸ್ ಇಲಾಖೆಯಲ್ಲಿಯೇ ಆರಂಭವಾಗಿದೆ.