ಬೆಂಗಳೂರು:– ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ಅಧಿಕಾರಿಗಳಿಂದ ಆರೋಪಿಗಳ ಸ್ಥಳ ಮಹಜರು ಮಾಡಲಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಆರೋಪಿಗಳನ್ನ ಕರೆತಂದು ಸ್ಥಳ ಮಹಜರು ಮಾಡಲಾಗುತ್ತಿದೆ. ಎನ್ಐಎ ಸ್ಥಳ ಮಹಜರು ಹಿನ್ನೆಲೆ ರಾಮೇಶ್ವರಂ ಕೆಫೆಗೆ ಭಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಭದ್ರತೆಗಾಗಿ 50 ಕ್ಕೂ ಅಧಿಕ ಸ್ಥಳೀಯವಾಗಿ ಪೊಲೀಸರ ನಿಯೋಜನೆ ಮಾಡಲಾಗಿದೆ. ವೈಟ್ ಫೀಲ್ಡ್ ವಿಭಾಗದ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಮುಸ್ಸಾವಿರ್ ಹುಸೇನ್ ಐಇಡಿ ಬಾಂಬ್ ಬ್ಲಾಸ್ಟ್ ಮಾಡಿದ್ದ. ಕೊಲ್ಕಾತ್ತಾದಲ್ಲಿ ಬಾಂಬರ್ ಮುಸ್ಸಾವಿರ್ ಹಾಗೂ
ಅಬ್ದುಲ್ ಮತೀನ್ ತಾಹನನ್ನು NIA ಬಂಧಿಸಿತ್ತು. ಘಟನೆ ನಡೆದ ಐದು ತಿಂಗಳ ಬಳಿಕ ಆರೋಪಿಗಳನ್ನ ಕರೆತಂದು ಅಧಿಕಾರಿಗಳು ಸ್ಥಳ ಮಹಜರು ಮಾಡುತ್ತಿದ್ದಾರೆ.