ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿರುವ ನಟಿ ಬಿಡುವು ಮಾಡಿಕೊಂಡು ನಟ ವಿಕ್ಕಿ ಕೌಶಲ್ ಜೊತೆ ರ್ಯಾಂಪ್ ವಾಕ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ಜೊತೆಯಾಗಿ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಫಾಲ್ಗುಗಿ ಶೇನ್ ಪಿಕಾಕ್ ಕಲೆಕ್ಷನ್ ಅವರ ಸುಂದರವಾದ ವೆಡ್ಡಿಂಗ್ ವೇರ್ ಧರಿಸಿ ಶೋ ಸ್ಟಾಪರ್ ಆಗಿ ರ್ಯಾಂಪ್ ವಾಕ್ ಮಾಡಿದ್ದರು.
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಜೊತೆಯಾಗಿ ಐತಿಹಾಸಿಕ ಚಿತ್ರ ಚವ್ವದಲ್ಲಿ ನಟಿಸಲಿದ್ದು, ಅದಕ್ಕೂ ಮುನ್ನ ಇಬ್ಬರು ಜೊತೆಯಾಗಿ ಫ್ಯಾಷನ್ ಶೋದಲ್ಲಿ ಕೈಕೈ ಹಿಡಿದು ರ್ಯಾಂಪ್ ವಾಕ್ ಮಾಡೋ ಮೂಲಕ ಮೋಡಿ ಮಾಡಿದ್ದರು. ಕಾರ್ಯಕ್ರಮದ ಬಳಿಕ ಇಬ್ಬರೂ ಜೊತೆಯಾಗಿ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ.
ರಶ್ಮಿಕಾ ಮಂದಣ್ಣ ಬಿಳಿ ಬಣ್ಣದ ಲೆಹೆಂಗಾ ಧರಿಸಿದ್ದು, ಅದರ ಮೇಲೆ ಗೋಲ್ಡನ್ ವರ್ಕ್ ಮಾಡಲಾಗಿದೆ. ಇದರ ಜೊತೆಗೆ ನಟಿ ತಾವು ಧರಿಸಿದ ಬಟ್ಟೆಗೆ ಮ್ಯಾಚ್ ಆಗುವಂತೆ ಬೈತಲೆ ಬೊಟ್ಟು ಧರಿಸಿದ್ದಾರೆ, ರಶ್ಮಿಕಾಗೆ ಪರ್ಫೆಕ್ಟ್ ಮ್ಯಾಚ್ ಆಗುವಂತೆ ವಿಕ್ಕಿ ಐವರಿ ಮತ್ತು ಬಿಳಿ ಬಣ್ಣದ ಬಂದ್ಗಲಾ ಶೆರ್ವಾನಿ ಧರಿಸಿದ್ದಾರೆ.
ಫಲ್ಗುಣಿ ಶೇನ್ ಪೀಕಾಕ್, ಎರಡು ದಶಕಗಳ ಭಾರತೀಯ ಕೌಚರ್ ಅನ್ನು ಮರುವ್ಯಾಖ್ಯಾನಿಸುವ ಮೂಲಕ, ತಮ್ಮ ಇತ್ತೀಚಿನ ಸಂಗ್ರಹವಾದ ‘ರಂಗ್ ಮಹಲ್’ ಅನ್ನು ಈವೆಂಟ್ನ ಪ್ರಮುಖ ಅಂಶವಾಗಿ ಪ್ರದರ್ಶಿಸಿದರು.
ಈ ಸಂಗ್ರಹವು ಭಾರತದ ಶ್ರೀಮಂತ ಸಾಂಸ್ಕೃತಿಕ ವಸ್ತ್ರ ಮತ್ತು ವಾಸ್ತುಶಿಲ್ಪದ ವೈಭವಕ್ಕೆ ರೋಮಾಂಚಕ ಗೌರವವಾಗಿದೆ. ಐತಿಹಾಸಿಕ ಅರಮನೆಗಳ ಐಶ್ವರ್ಯದಿಂದ ಸ್ಫೂರ್ತಿ ಪಡೆದ ‘ರಂಗ್ ಮಹಲ್’ ಆಧುನಿಕ ಸೌಂದರ್ಯಶಾಸ್ತ್ರದೊಂದಿಗೆ ಸಾಂಪ್ರದಾಯಿಕ ಕಲೆಗಾರಿಕೆಯನ್ನು ಸಂಯೋಜಿಸಿದ ಸುಮಾರು ನಲವತ್ತು ಸೂಕ್ಷ್ಮವಾಗಿ ರಚಿಸಲಾದ ಮೇಳಗಳನ್ನು ಒಳಗೊಂಡಿತ್ತು.
ಭಾರತದ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲಗಳನ್ನು ಸಂರಕ್ಷಿಸುವ ಬದ್ಧತೆಗೆ ಹೆಸರುವಾಸಿಯಾದ ಸ್ವದೇಶ್, ಈ ಕರಕುಶಲ ಅದ್ಭುತಗಳನ್ನು ಜಾಗತಿಕ ಫ್ಯಾಷನ್ನ ಮುಂಚೂಣಿಗೆ ತರಲು ಡಿಸೈನರ್ ಜೋಡಿಯೊಂದಿಗೆ ನಿಕಟವಾಗಿ ಸಹಕರಿಸುತ್ತದೆ.