ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಈ ಮಧ್ಯೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ರನ್ನು ಜೈಲಿನಿಂದ ಹೊರ ತರಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ. ಸಾಕಷ್ಟು ದೇವಸ್ಥಾನಗಳಿಗೆ ಬೇಟಿ ನೀಡಿ ಪತಿಯ ಬಿಡುಗಡೆಗೆ ಬೇಡಿಕೊಳ್ಳುತ್ತಿದ್ದಾರೆ.ಇದೀಗ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬನಶಂಕರಿ ದೇವಸ್ಥಾನಕ್ಕೆ ಭೇಟಿನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಮಂದಿ ಪರಪ್ಪನ ಅಗ್ರಹಾರ ಸೇರಿ 50 ದಿನಗಳು ಕಳೆದಿದೆ. ದಿನದಿಂದ ದಿನಕ್ಕೆ ಕೇಸ್ ಟ್ವಿಸ್ಟ್ ಪಡೆಯುತ್ತಿದೆ. ಪತಿಯನ್ನು ಬಿಡಿಸಿಕೊಂಡು ಹೊರ ಬರಲು ಸಾಕಷ್ಟು ಹರ ಸಾಹಸ ಮಾಡುತ್ತಿದ್ದಾರೆ ವಿಜಯಲಕ್ಷ್ಮಿ. ಈ ನಡುವೆ ಟೆಂಪಲ್ ರನ್ನಲ್ಲಿ ಕೂಡ ಬ್ಯುಸಿಯಾಗಿಬಿಟ್ಟಿದ್ದಾರೆ.
ಆಗಸ್ಟ್ 4ರಂದು ಭೀಮನ ಅಮಾವಾಸ್ಯೆ ಪ್ರಯುಕ್ತ ಬೆಂಗಳೂರಿನಲ್ಲಿ ಇರುವ ಬನಶಂಕರಿ ದೇವಿಯ ದರ್ಶನ ಮಾಡಿದ್ದಾರೆ ವಿಜಯಲಕ್ಷ್ಮಿ ದರ್ಶನ್ ಮತ್ತು ಡಾ.ಶ್ರುತಿ ಗೌಡ. ಎಲ್.ಆರ್.ಶಿವರಾಮೇಗೌಡ ರವರ ಸೊಸೆ ಡಾ.ಶೃತಿ ಗೌಡ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
ಕೆಲವು ದಿನಗಳ ಹಿಂದೆ, ಕೊಲ್ಲೂರಿನಲ್ಲಿ ನವಚಂಡಿಕಾಯಾಗದ ಸಂಕಲ್ಪ, ಪಾರಾಯಣದಲ್ಲಿ ಭಾಗಿಯಾಗಿ ಬಳಿಕ ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದ ಯಾಗಶಾಲೆಯಲ್ಲಿ ದರ್ಶನ್ ಬಂಧಮುಕ್ತಿಗಾಗಿ ಪ್ರಾರ್ಥನೆ , ಸಂಕಲ್ಪ ಮಾಡಿದರು. ಇದೀಗ ಪತಿಯ ಬಿಡುಗಡೆಗಾಗಿ ಬನಶಂಕರಿ ದೇವಿ ಮೊರೆ ಹೋಗಿದ್ದಾರೆ.