ಚಂಡೀಗಢ:- ಇನ್ನೂ 5 ವರ್ಷ ಆದ್ಮೇಲೂ ಮತ್ತೆ ಮೋದಿಯೇ ಪ್ರಧಾನಿ ಆಗ್ತಾರೆ ಎಂದು ಸಚಿವ ಅಮಿತ್ ಶಾ ಹೇಳಿದ್ದಾರೆ.ಮೋದಿ ಸರ್ಕಾರದ ಬಲ ಪ್ರಶ್ನಿಸಿದ್ದಕ್ಕೆ 2029ರಲ್ಲಿ ಮತ್ತೆ ಎನ್ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತೆ. ವಿಪಕ್ಷದಲ್ಲಿ ಕೂರಲು ಇಂಡಿಯಾ ಬಣ ತಯಾರಾಗಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.
ಪ್ರತಿಪಕ್ಷಗಳು ಏನು ಬೇಕಾದರೂ ಮಾಡಲಿ. 2029ರಲ್ಲಿ ದೇಶದಲ್ಲಿ ಮತ್ತೆ ಎನ್ಡಿಎ ಸರ್ಕಾರ ಬರಲಿದೆ. ಮತ್ತೆ ಮೋದಿಯೇ ಬರುತ್ತಾರೆಂದು ಅವರಿಗೆ ಗೊತ್ತಿಲ್ಲ ಎಂದು ಪ್ರತಿಪಕ್ಷಗಳಿಗೆ ಶಾ ತಿರುಗೇಟು ನೀಡಿದ್ದಾರೆ.
24×7 ನೀರು ಈ ಯೋಜನೆಯಿಂದ ಇದೀಗ ಮಣಿಮಜ್ರಾ ಜನತೆಗೆ 24 ಗಂಟೆ ನೀರು ಸಿಗಲಿದೆ. ಜನರು ನೀರು ತರಲು ಅಲಾರಂ ಹಾಕುವ ಅಗತ್ಯವಿಲ್ಲ, ಈಗ ನೀವು ನಲ್ಲಿ ತಿರುಗಿಸಿದರೆ ಸಾಕು ನೀರು ಬರುತ್ತದೆ. ಈ ಯೋಜನೆಯಿಂದ ಮಣಿಮಜ್ರಾದ 1 ಲಕ್ಷ ಜನರಿಗೆ ಅವರ ಮನೆಗಳಲ್ಲಿ 24 ಗಂಟೆ ನೀರು ದೊರೆಯಲಿದೆ. ಈ ಯೋಜನೆಯನ್ನು ಮೋದಿ ಸರ್ಕಾರವು 13 ನವೆಂಬರ್ 2021 ರಂದು ಪ್ರಾರಂಭಿಸಿತು ಎಂದು ತಿಳಿಸಿದ್ದಾರೆ.