ಬೆಂಗಳೂರು:- ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ತರಕಾರಿ, ಹೂ, ಹಣ್ಣುಗಳ ಬೆಲೆ ದಿಢೀರ್ ಏರಿಕೆ ಆಗಿದೆ. ಶ್ರಾವಣ ಮಾಸ ಆರಂಭವಾಗಿದೆ ಎನ್ನುವ ಕಾರಣಕ್ಕೆ ಹೂ, ಹಣ್ಣು, ತರಕಾರಿಗಳ ಬೆಲೆ ಏರಿಕೆ ಮಾಡಿದ್ದಾರೆ. ಹೀಗಾಗಿ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ತರಕಾರಿಗಳ ಬೆಲೆ 10 ರಿಂದ 20 ರೂಪಾಯಿ ಏರಿಕೆಯಾಗಿದ್ದು, ಹೂವಿನ ಬೆಲೆ 200 ರೂಪಾಯಿಯಷ್ಟು ಏರಿಕೆಯಾಗಿದೆ.
ಶ್ರಾವಣಮಾಸ ಆಭವಾಗುತ್ತಿದ್ದಂತೆಯೇ ನಾಗಾರ ಪಂಚಮಿ, ವರಮಹಲಕ್ಷ್ಮಿ, ಶ್ರಾವಣ ಶನಿವಾರ, ಗೌರಿ – ಗಣೇಶ ಚತುರ್ಥಿಗಳು ಒಂದರ ಮೇಲೊಂದು ಬರುತ್ತಲೇ ಇರುತ್ತವೆ. ಈ ಅವಧಿಯಲ್ಲಿ ತರಕಾರಿ, ಹೂ, ಹಣ್ಣುಗಳಿಗೆ ಬೇಡಿಕೆ ಹೆಚ್ಚು. ಹೀಗಾಗಿ ತರಕಾರಿಗಳ ಬೆಲೆ ದುಪ್ಪಟ್ಟಾಗಿ ಹೋಗಿವೆ. ಟೊಮೆಟೊ, ಈರುಳ್ಳಿ, ಬೆಳ್ಳಳ್ಳಿ, ಆಲೂಗಡ್ಡೆ, ಕ್ಯಾರೆಟ್ ಬಿಟ್ರೂಟ್ ಬೆಲೆ ವಿಪರೀತ ಜಾಸ್ತಿಯಾಗಿದೆ.