ಪ್ರತಿಭಟನೆಗೆ ಮಣಿದ ಬಾಂಗ್ಲಾದೇಶದ ಪ್ರಧಾನಿ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನಮಾಡಿದ್ದಾರೆ. ಹಸೀನಾ ಪಾಲಾಯನ ಮಾಡುತ್ತಿದ್ದಂತೆ ಪ್ರತಿಭಟನಾಕಾರರ ಗುಂಪು ಅವರ ಅಧಿಕೃತ ನಿವಾಸಕ್ಕೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ದೋಚಿಸಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಯಲ್ಲಿದ್ದ ಸಾಕು ಪ್ರಾಣಿಗಳನ್ನು ಹೊತ್ತೊಯ್ದಿದ್ದಾರೆ.
ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಮನೆಯ ಕುರ್ಚಿಗಳು, ಬಟ್ಟೆಗಳು, ಸಾಕು ಪ್ರಾಣಿಗಳು, ಕೋಳಿಗಳು, ಮೀನು, ಬೆಕ್ಕು ಮತ್ತು ಜರ್ಮನ್ ಶೆಫರ್ಡ್ ನಾಯಿ ಸೇರಿದಂತೆ ಸೇರಿದಂತೆ ಅನೇಕ ವಸ್ತುಗಳನ್ನು ಲೂಟಿ ಮಾಡಿದರು.
ಇದೀಗ ಬಾಂಗ್ಲಾದೇಶದ ಸ್ವಯಂಸೇವಾ ಸಂಸ್ಥೆಯೊಂದು ಶೇಖ್ ಹಸೀನಾ ಅವರ ಅಧಿಕೃತ ನಿವಾಸಿದಿಂದ ಲೂಟಿ ಮಾಡಿದ್ದ ಜರ್ಮನ್ ಶೆಫರ್ಡ್ ಮತ್ತು ಬೆಕ್ಕನ್ನು ಹಿಂದಿರುಗಿಸುವ ಕೆಲಸ ಮಾಡಿದ್ದಾರೆ.
ಶೇಖ್ ಹಸೀನಾ ಅವರ ನಿವಾಸದಿಂದ ಲೂಟಿ ಮಾಡಿದ ಬೆಕ್ಕನ್ನು 40 ಸಾವಿರ ರೂ. ಬಾಂಗ್ಲಾದೇಶಿ ಟಾಕಾಗೆ ಮಾರಾಟ ಮಾಡಲಾಗಿತ್ತು. ಬಾಂಗ್ಲಾದೇಶದ ವಿಶೇಷ ಭದ್ರತಾ ಪಡೆ ಹಸೀನಾ ಅವರ ನೆಚ್ಚಿನ ಜರ್ಮನ್ ಶೆಫರ್ಡ್ ಅನ್ನು ಕೂಡ ಕರೆತರಲಾಗಿದೆ. ಅಭೊಯಾರೊನ್ನೊ ಹೆಸರಿನ ಸಂಸ್ಥೆಯು ಫೇಸ್ಬುಕ್ ಪೋಸ್ಟ್ನಲ್ಲಿ ಹಸೀನಾರ ಬೆಕ್ಕನ್ನು ಮನೆಗೆ ಹಿಂದಿರುಗಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ.
ನಿವಾಸದಿಂದ ಲೂಟಿ ಮಾಡಿರುವ ಎಲ್ಲಾ ಪ್ರಾಣಿಗಳನ್ನು ಹಿಂದಿರುಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸಂಘಟನೆ ಹೇಳಿದೆ. ಅಗತ್ಯ ಬಿದ್ದರೆ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಸಂಘಟನೆಯು ಪ್ರಾಣಿಗಳನ್ನು ಲೂಟಿ ಮಾಡಿದವರು ಅವುಗಳನ್ನು ತಕ್ಷಣ ಹಿಂದಿರುಗಿಸುವಂತೆ ವಿನಂತಿಸಿದೆ.