ಬೆಂಗಳೂರು:- ಅಕೌಂಟ್ ಗೆ ಹಾಕ್ತೀನಿ ಕ್ಯಾಶ್ ಕೊಡಿ ಅಂತ ಕೇಳಿದ್ರೆ ದುಡ್ಡು ಕೊಡುವ ಮುನ್ನ ಹುಷಾರ್. ಮೆಡಿಕಲ್ ಎಮರ್ಜೆನ್ಸಿ ನಾಟಕವಾಡಿ ಅಂಗಡಿಗಳಿಗೆ ಉಂಡೆನಾಮ ಹಾಕುತ್ತಾರೆ ಎಚ್ಚರ
ಹೌದು, ಕ್ಯಾಶ್ ಕೊಡಿ ಅಕೌಂಟ್ ಗೆ ಹಾಕ್ತೇನೆ ಅಂತ ಅಂದ್ರಹಳ್ಳಿಯ ಸೈಬರ್ ಸೆಂಟರ್ ಮಾಲೀಕನಿಗೆ ಖದೀಮ ಯಾಮಾರಿಸುವ ಘಟನೆ ನಡೆದಿದೆ.
ಸ್ವಲ್ಪ ಮೆಡಿಕಲ್ ಎಮರ್ಜೆನ್ಸಿ ಇದೆ 10000 ನಿಮ್ಮ ಅಕೌಂಟ್ ಗೆ ಹಾಕ್ತೇನೆ ಕೊಡಿ ಅಂತಾನೆ. ಇಲ್ಲ ಅಂದರೆ 5000 ಆದ್ರೂ ಕೊಡಿ ಮೆಡಿಕಲ್ ಎಮರ್ಜೆನ್ಸಿ ಅಂತ ಬಣ್ಣದ ಮಾತು ಕಟ್ಟುತ್ತಾನೆ. ಸ್ಕ್ಯಾನರ್ ಗೆ ಹಾಕು ಅಂತ ಹೇಳಿದರೆ ಸ್ಕ್ಯಾನ್ ಮಾಡಿ ನೆಟ್ ಆಫ್ ಮಾಡುತ್ತಾನೆ. ನಂತರ ಸ್ಕ್ಯಾನರ್ ವರ್ಕ್ ಆಗ್ತಿಲ್ಲ ಮೊಬೈಲ್ ನಂಬರ್ ಗೆ ಹಾಕ್ತೀನಿ ಎಂಬ ನಾಟಕ ಆಡುತ್ತಾನೆ.
ಪೇಕ್ ಆಯಪ್ ಮುಖಾಂತರ ಪೇಮೆಂಟ್ ಸಕ್ಸಸ್ ಅನ್ನುವ ಸ್ಕ್ರೀನ್ ತೋರಿಸಿ ಮೋಸ ಮಾಡುತ್ತಾನೆ. ಹಣ ಪಡೆದು ಕ್ಷಣ ಮಾತ್ರಕ್ಕೆ ಪರಾರಿ, ಆಗುತ್ತಾನೆ. ಚೆಕ್ ಮಾಡಿದಾಗ ಖಾತೆಗೆ ಹಣನೇ ಬಂದಿಲ್ಲ. ವಂಚನೆ ವಿಡಿಯೋ ಸಿಸಿಟಿವಿ ವಿಡಿಯೋ ಎಕ್ಸ್ ನಲ್ಲಿ ಅಪ್ಲೋಡ್ ಮಾಡಿದ್ದು, ಮೋಸಹೋದವನು ಅಳಲು ತೋಡಿಕೊಂಡಿದ್ದಾನೆ.
ಯಾರೂ ಈ ರೀತಿ ಮೋಸ ಹೋಗಬೇಡಿ, ಈ ರೀತಿ ಬಂದರೆ ಪೊಲೀಸರಿಗೆ ತಿಳಿಸಿ ಅಂತ ಮನವಿ ಮಾಡಿದ್ದಾರೆ.
ಅಂದ್ರಹಳ್ಳಿ , ತಿಗಳರಪಾಳ್ಯ, D Group ಸುತ್ತಮುತ್ತ ಅಂಗಡಿಗಳಿಗೆ ಮೋಸ ಮಾಡಿದ್ದಾನೆ ಅಂತ ಪೋಸ್ಟ್ ಮಾಡಿದ್ದಾರೆ.