ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನಲೆ ಕೃಷ್ಣಾ ನದಿ ಒಳ ಹರಿವಿನಲ್ಲಿ ಇಳಿಕೆ ಉಗಾರ – ಕುಡಚಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ
ಬೆಳಗಾವಿ ಜಿಲ್ಲೆಯ ರಾಯಬಾಗ ಹಾಗೂ ಕಾಗವಾಡ ತಾಲೂಕಿನ ಮಧ್ಯ ಭಾಗದಲ್ಲಿರುವ ಉಗಾರ – ಕುಡಚಿ ಸೇತುವೆ ಸಂಚಾರಕ್ಕೆ ಮುಕ್ತ.
ಮಹಾರಾಷ್ಟ್ರ – ಕರ್ನಾಟಕ ಕೊಂಡಿಯಾಗಿರುವ ಕುಡಚಿ – ಉಗಾರ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ
ಪ್ರವಾಹದ ಆತಂಕದಲ್ಲಿರುವ ನದಿ ತೀರದ ಜನರು ನಿರಾಳರಾಗಿದ್ದಾರೆ. ಸದ್ಯ ಕೃಷ್ಣಾ ನದಿಗೆ ರಾಜಾಪೂರ ಬ್ಯಾರೇಜ್ನಿಂದ 94,833 ಕ್ಯೂಸೆಕ್ ನೀರು, ದೂದಗಂಗಾ ನದಿಯಿದ 24,640 ಕ್ಯೂಸೆಕ್ ನೀರು ಹೀಗೆ ಒಟ್ಟು ಕೃಷ್ಣಾ ನದಿಗೆ 1,10,473 ಕ್ಯೂಸೆಕ್ ನೀರು ಒಳ ಹರಿವಿದೆ.