ಧಾರವಾಡ: ಹಲವು ಬೇಡಿಕೆಗಳಿಗೆ ಆಗ್ರಹಿಸಿ ಧಾರವಾಡ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಮಾರ್ಕೋಪೊಲೊ ಕಾರ್ಮಿಕರ ಧರಣಿ 8ನೇ ದಿನಕ್ಕೆ ಕಾಲಿಟ್ಟಿದೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ೮ ದಿನಗಳಿಂದ ಸತತವಾಗಿ ಈ ಕಾರ್ಮಿಕರು ಧರಣಿ ನಡೆಸಿದರೂ ಯಾರೂ ಕೂಡಾ ಇವರ ಮನವಿ ಆಲಿಸಿಲ್ಲ, ವೇತನ ಪರಿಷ್ಕರಣೆ ಮಾಡಬೇಕು, ಬೇರೆ ರಾಜ್ಯಕ್ಕೆ ಕಾರ್ಮಿಕರ ವರ್ಗಾವಣೆ ಮಾಡಬಾರದು ಹಾಗೂ ಹಿಂದೆ ಪ್ರತಿಭಟನೆ ಮಾಡಿದ ಕಾರ್ಮಿಕರಿಗೆ ಕೆಲಸದಿಂದ ತೆಗೆದು ಹಾಕಲಾಯಿದ್ದು, ಅವರನ್ನ ಮತ್ತೆ ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಧರಣಿ ನಿರತ ಕಾರ್ಮಿಕರು ಆಗ್ರಹಿಸಿದ್ದಾರೆ.
ಈಗಾಗಲೇ ಹಲವು ಕಾರ್ಮಿಕ ಸಂಘಟನೆ ಈ ಧರಣಿಗೆ ಬೆಂಬಲ ಸೂಚಿಸಿದ್ದಾರೆ. ತಮ್ಮ ಕೆಲಸಕ್ಕೆ ಹಾಜರಾಗುತ್ತಲೇ ಈ ಕಾರ್ಮಿಕರು ಧರಣಿಗೆ ಕೂಡ ಬಂದು ಸೇರುತಿದ್ದಾರೆ.