ಬೆಂಗಳೂರು, ಮಳೆಯಿಂದಾಗಿ ನಗರದಲ್ಲಿ ನೂರಾರು ಮರಗಳು ಧರೆಗುರುವೆ, ಮತ್ತೊಂದೆಡೆ ನಗರದ ಪ್ರಮುಖ ಬೀದಿಗಳಲ್ಲಿ ಒಣಗಿದ ಮರಗಳು ಜನರ ಬಲಿಗಾಗಿ ಕಾದು ನಿಂತಿದ್ರೆ, ಜಯನಗರ 4 ನೇ ಬ್ಲಾಕ್ನ ಬಿಬಿಎಂಪಿ ಸಾರ್ವಜನಿಕ ಪಾರ್ಕ್ನಲ್ಲಿ15 ಕ್ಕೂ ಅಧಿಕ ಮರಗಳು ಒಣಗಿ ಹೋಗಿದ್ದು ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದ್ದು, ಬೆಳಿಗ್ಗೆ ಸಾಯಂಕಾಲ ವಾಕಿಂಗ್ಗೆ ಬರೋ ಜನರು ವಾಕಿಂಗ್ ಮಾಡಲು ಭಯ ಪಡುವಂತಾಗಿದ್ದು, ವಾಕಿಂಗ್ ಮಾರೋರು ಜೀವಕಳೆದುಕೊಳ್ಳೊಕೆ ಬರ್ತಾರಾ ಹೀಗಾಗಿ ಒಣಗಿದ ಮರಗಳನ್ನ ತೆರವುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.
ಯಾವುದೇ ಮರಗಳನ್ನ ಪಾಲಿಕೆ ಅನುಮತಿ ಇಲ್ಲದೇ ತೆರವಿಗೊಳಿಸುವಂತಿಲ್ಲ. ಇನ್ನೂ ಈ ಪಾರ್ಕ್ನ್ನ ತುಂಬಾ ಚೆನ್ನಾಗಿ ನಿರ್ವಹಣೆ ಮಾಡಲಾಗುತ್ತಿದೆಯಾದರೆ ಅವರು ಮರಗಳನ್ನ ತೆರವುಗೊಳಿಸುವಂತಿಲ್ಲ. ಇಲ್ಲಿರುವಂತಹ ಮರಗಳ ಒಣಗಿದ ರೆಂಬೆಕೊಂಬೆ ಹಾಗೂ ಸಂಪೂರ್ಣವಾಗಿ ಒಣಗಿದ ಮರಗಳನ್ನ ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳು ತೆರವುಗೊಳಿಸಬೇಕು. ಆದರೆ ಪಾಲಿಕೆ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆ ಕೆಡಸಿಕೊಳ್ಳದೇ ನಿರ್ಲಕ್ಷ ವಹಿಸುತ್ತಿದ್ದಾರೆ.
ಪರಿಣಾಮ ಪಾರ್ಕ್ನಲ್ಲಿ ಕುಳಿತುಕೊಳ್ಳಲು ಓಡಾಡಲು ಭಯ ಪಡುತ್ತಿರೋ ಜನರು ಮತ್ತೊಂದೆಡೆಗೆ ಒಣಗಿದ ಮರಗಳಿಂದ ಪಾರ್ಕ್ ಪಕ್ಕದಲ್ಲಿ ವಾಹನಗಳನ್ನ ನಿಲ್ಲಿಸಲು ಕೂಡ ಜನರು ಭಯ ಪಡುವಂತಾಗಿದೆ. ಮಳೆ ಬಂದು ಮರ ಬಿದ್ದಾಗ ತೆರವುಗೊಳಿಸುವ ಬದಲು ಇದೀಗ ಒಣಗಿದ ಮರಗಳನ್ನ ತೆರವುಗೊಳಿಸುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅನಕೂಲ ಮಾಡಿಕೊಡಿ ಎನ್ನುತ್ತಾರೆ ವಾಯುವಿಹಾರಿಗಳು.