ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿ ತರುಣ್ ಸುಧೀರ್ ಹಾಗೂ ನಟಿ ಸೋನಲ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಾರಾ ಜೋಡಿಯಾದ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ ಆರತಕ್ಷತೆಗೆ ಸ್ಯಾಂಡಲ್ ವುಡ್ ನ ಅನೇಕ ಗಣ್ಯರ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ. ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿಯಾಗಿ ಎಂಟ್ರಿಕೊಟ್ಟ ನಟಿ ಮಲಾಶ್ರೀ ಮಗಳು ಆರಾಧನಾ ರಾಮ್ ತರುಣ್ ಹಾಗೂ ಸೋನಲ್ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ತರುಣ್ ಸುಧೀರ್ ಸಿನಿಮಾ ರಂಗದ ಜೊತೆಗೆ ರಾಜಕೀಯ ಗಣ್ಯರ ಜೊತೆಯು ಉತ್ತಮ ಸಂಪರ್ಕ ಹೊಂದಿದ್ದಾರೆ. ಇದೇ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವ ಜೋಡಿಗೆ ವಿಶ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ದಿಗ್ಗಜ ಸಂಗೀತ ನಿರ್ದೇಶಕ, ಗೀತರಚನಕಾರ ಹಂಸಲೇಖ ಅವರು ಆರತಕ್ಷತೆ ಸಮಾರಂಭಕ್ಕೆ ಬಂದು ತರುಣ್ ಹಾಗೂ ಸೋನಲ್ ಅವರನ್ನು ಆಶೀರ್ವದಿಸಿದ್ದಾರೆ. ‘ರಾಬರ್ಟ್’ ನಿರ್ಮಾಪಕ ಉಮಾಪತಿ ಗೌಡ ಕೂಡ ಹಾಜರಿ ಹಾಕಿದ್ದಾರೆ.
ನಿರ್ಮಾಪಕ ಕೆ. ಮಂಜು, ನಟ ರಮೇಶ್ ಅರವಿಂದ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ರಿಷಬ್ ಶೆಟ್ಟಿ, ಕಾರುಣ್ಯ ರಾಮ್, ಹರ್ಷಿಕಾ ಪೂಣಚ್ಚ, ಜಗ್ಗೇಶ್, ರಾಗಿಣಿ ದ್ವಿವೇದಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ತರುಣ್-ಸೋನಲ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಆರತಕ್ಷತೆಗೂ ಮುನ್ನ ವೇದಿಕೆ ಹತ್ತಿದ ನವಜೋಡಿ ಮೊದಲಿಗೆ ದಿವಂಗತ ಸುಧೀರ್ ಅವರ ಫೋಟೋಗೆ ಪುಷ್ಪಾರ್ಚನೆ ಸಲ್ಲಿಸಿದ್ದರು. ಬಳಿಕ ಈ ಜೋಡಿ ತಾಯಿ ಮಾಲತಿ ಅವರ ಆಶೀರ್ವಾದ ಪಡೆದುಕೊಳ್ತು. ಆರತಕ್ಷತೆಗೆ ತರುಣ್ ಅವರು ಶೇರ್ವಾನಿಯಲ್ಲಿ ಕಾಣಿಸಿಕೊಂಡರೆ, ಸೋನಲ್ ಲೆಹೆಂಗಾದಲ್ಲಿ ಮಿರ ಮಿರ ಮಿಂಚಿದ್ದರು.
ಇಡೀ ಮದುವೆ ವೇದಿಕೆ ಅಪ್ಪಟ್ಟ ರೆಡ್ ಕಾರ್ಪೆಟ್ ಮತ್ತು ಫಿಲ್ಮ್ ಅವಾರ್ಡ್ ಇವೆಂಟ್ ನೆನಪಿಸುವಂತಿದೆ. ಕಲ್ಯಾಣ ಮಂಟಪ ಪೂರ್ತಿ ಕಪ್ಪು ಹಾಗೂ ಕೆಂಪಿನ ಬಣ್ಣ. ಸುಗಂಧ ಸೂಸುವ ಗುಲಾಬಿ ಹೂಗಳಿಂದ ಅಲಂಕೃತಗೊಂಡಿತ್ತು. ತರುಣ್ ಸುಧೀರ್, ಸೋನಲ್ ಆರತಕ್ಷತೆ ಸಂಭ್ರಮದಲ್ಲಿ ಇಡೀ ಸ್ಯಾಂಡಲ್ವುಡ್ ಬಳಗವೇ ನೆರೆದಿತ್ತು.
ಸ್ಟಾರ್ಗಳಲ್ಲಿ ಲವ್ಲಿ ಪ್ರೇಮ್ ತಮ್ಮ ಕುಟುಂಬದ ಜೊತೆಗೆ ಬಂದಿದ್ರು. ಸಾಧುಕೋಕಿಲಾ, ನಟ ಶರಣ್ ಸೇರಿ ಹಲವು ತಾರೆಯರ ಮೇಳ ಮೆರಗು ತುಂಬಿತು. ಕಾಂತಾರ ಸಿನಿಮಾ ಶೂಟಿಂಗ್ ಬಿಸಿಯಲ್ಲಿದ್ದ ರಿಷಬ್ ಶೆಟ್ಟಿ ದಂಪತಿ ಬಂದು ಹರಸಿ ಹಾರೈಸಿದ್ರು.