ಕಾಟೇರ ಸಿನಿಮಾದ ವೇಳೆ ಶುರುವಾದ ಪ್ರೀತಿಗೆ ತರುಣ್ ಸುಧೀರ್ ಹಾಗೂ ಸೋನಲ್ ಮದುವೆಗೆ ಮುದ್ರೆ ಒತ್ತಿದ್ದಾರೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸೋನಲ್ ಹಾಗೂ ತರುಣ್ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋನಲ್ ಹಾಗೂ ತರುಣ್ ಕಾಟೇರ ಸಿನಿಮಾದ ಹಾಡಿಗೆ ಗ್ರ್ಯಾಂಡ್ ಆಗಿ ವೇದಿಕೆಗೆ ಎಂಟ್ರಿಕೊಟ್ಟಿದ್ದಾರೆ.
ಬ್ಲ್ಯಾಕ್ ಕಲರ್ ಗೋಲ್ಡ್ ಎಂಬ್ರಾಯ್ಡರಿ ಕಾಂಬಿನೇಷನ್ ಶೆರ್ವಾನಿಯಲ್ಲಿ ತರುಣ್ ಸುಧೀರ್ ಮಿಂಚುತ್ತಿದ್ದರೆ, ಗೋಲ್ಡ್ ಕಲರ್ ಲೆಹಂಗದಲ್ಲಿ ವಧು ಸೋನಲ್ ಕಂಗೊಳಿಸುತ್ತಿದ್ದಾರೆ.
ದರ್ಶನ್ ಅವರಿಂದಲೇ ನಮ್ಮ ಪ್ರೀತಿ ಶುರುವಾಯಿತು ಎಂದು ಸೋನಲ್ ಹಾಗೂ ತರುಣ್ ಅವರು ಹೇಳಿಕೊಂಡಿದ್ದರು. ಬೆಂಗಳೂರಿನ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಸಭಾಂಗಣದಲ್ಲಿ ಆರತಕ್ಷತೆ ಹಾಗೂ ಮದುವೆ ನಡೆಯುತ್ತಿದೆ. ಅವಾರ್ಡ್ ಫಂಕ್ಷನ್ ಥೀಮ್ನಲ್ಲಿ ಸಿದ್ಧವಾದ ವೇದಿಕೆಯಲ್ಲಿ ಆರತಕ್ಷತೆ ಹಾಗೂ ಮದುವೆ ನಡೆಯಲಿದೆ. ಸಂಪೂರ್ಣವಾಗಿ ಕೆಂಪು ಬಣ್ಣದ ಅಲಂಕಾರದಿಂದ ಮದುವೆ ಹಾಲ್ ಮಿಂಚುತ್ತಿದೆ. ಕೆಂಪು ಹೂವುಗಳು, ಕೆಂಪು ಕಾರ್ಪೆಟ್, ಕೆಂಪು ದೀಪಗಳನ್ನು ಅಲಂಕಾರಕ್ಕೆ ಬಳಕೆ ಮಾಡಿದ್ದು, ಪ್ರೀತಿಸಿ ಮದುವೆಯಾಗುತ್ತಿರುವ ತಾರಾಜೋಡಿಗೆ ಜೋಡಿಗೆ ರೆಡ್ ಥೀಮ್ ವೇದಿಕೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.