ಈರುಳ್ಳಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಬಹು ಪ್ರಯೋಜನಗಳಿದ್ದು, ಇದರಿಂದ ನಮ್ಮ ದೇಹಕ್ಕೆ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣ ಹಾಗೂ ವಿಟಮಿನ್ ಬಿ ಸೇರಿದಂತೆ ವಿವಿಧ ಉಪಯುಕ್ತ ಪೋಷಕಾಂಶಗಳು ನಮ್ಮ ದೇಹಕ್ಕೆ ಸಿಗುತ್ತವೆ.
ಈರುಳ್ಳಿಯನ್ನು ಕತ್ತರಿಸುವಾಗ ನಿಮಗೆ ಹಲವು ಬಾರಿ ಈರುಳ್ಳಿಯ ಮೇಲ್ಭಾಗದಲ್ಲಿ ಅಥವಾ ಈರುಳ್ಳಿಯ ಒಳಭಾಗಗಳಲ್ಲಿ ಹೆಚ್ಚಾಗಿ ಕರಿ ಬಣ್ಣ ಕಾಣಿಸುತ್ತದೆ. ಇದನ್ನು ಕೆಲವರು ಕತ್ತರಿಸುತ್ತಾರೆ ಮತ್ತೊಂದಿಷ್ಟು ಜನರು ತೊಳೆದು ತಿನ್ನುತ್ತಾರೆ. ಈರುಳ್ಳಿಯಲ್ಲಿ ಕಂಡುಬರುವ ಕಪ್ಪು ಬಣ್ಣವನ್ನು ಆಸ್ಪರ್ಜಿಲಸ್ ನೈಗರ್ ಎಂದು ಕರೆಯಲಾಗುತ್ತದೆ. ಈ ರೀತಿಯ ಕಪ್ಪು ಬಣ್ಣದ ಶಿಲೀಂದ್ರವು ಹೆಚ್ಚಾಗಿ ಮಣ್ಣಿನಲ್ಲಿ ಕಂಡುಬರುತ್ತದೆ. ಇದು ಒಂದು ರೀತಿಯ ವಿಷವನ್ನು ಬಿಡುಗಡೆ ಮಾಡುತ್ತದೆ ಎಂದು ಸಂಶೋಧನೆಯು ತಿಳಿಸಿದೆ.
ಒಂದು ವೇಳೆ ನೀವು ಖರೀದಿಸಿದ ಈರುಳ್ಳಿಯ ಮೇಲೆ ಕಪ್ಪು ಬಣ್ಣವಿದ್ದರೆ ಅದನ್ನು ನೀವು ತೆಗೆದುಹಾಕಿ ಸ್ವಚ್ಛವಾಗಿ ತೊಳೆದು ಬಳಸಿದರೆ ಇದರಿಂದ ಯಾವುದೇ ಅಪಾಯವಿಲ್ಲ ಆದರೆ, ಅಲರ್ಜಿ ಇರುವವರಿಗೆ ಇದು ಅಪಾಯಕಾರಿ ಎಂದು ಹೇಳಬಹುದು. ಅದೇ ರೀತಿ ನಿಮಗೆ ಅಸ್ತಮಾ ಇದ್ದರೂ ಕೂಡ ಇದು ಅಪಾಯಕಾರಿ. ಒಂದು ವೇಳೆ ಈರುಳ್ಳಿಯ ಒಳಭಾಗವೂ ಕೂಡ ಕಪ್ಪು ಬಣ್ಣವಿದ್ದರೆ ಅದನ್ನು ತಿನ್ನಬೇಡಿ.