ಬಾಲಿವುಡ್ನ ಖ್ಯಾತ ನಟರು ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಳ್ತಿದ್ದಾರೆ. ಅವುಗಳ ಪ್ರಾಣಕ್ಕೆ ಮಾರಕ ಎಂದು ಗೊತ್ತಿದ್ದರು ಸೆಲೆಬ್ರಿಟಿಗಳು ಮಾತ್ರ ಜಾಹೀರಾತಿನಲ್ಲಿ ಮಾನ್ ಮಾಸಾಲ ಸೇವಿಸಿ ಎಂದು ಹೇಳ್ತಿದ್ದಾರೆ. ಅಂಥವರ ವಿರುದ್ಧ ಈಗಾಗಲೇ ಸಾಕಷ್ಟು ಭಾರಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಬಾಲಿವುಡ್ನ ಹಿರಿಯ ನಟ ಮುಖೇಶ್ ಖನ್ನಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತುಂಬ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ದೊಡ್ಡ ಮೊತ್ತದ ಸಂಭಾವನೆ ಪಡೆದು ಸ್ಟಾರ್ ನಟನರು ಇಂಥ ಜಾಹೀರಾತಿನಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಕ್ಕೆ ಉತ್ತರಿಸಿದ ಮುಖೇಶ್ ಖನ್ನಾ, ‘ನನ್ನನ್ನು ಕೇಳಿದರೆ, ಅಂಥ ನಟರನ್ನು ಹಿಡಿದು ಹೊಡೆಯಬೇಕು ಎನ್ನುತ್ತೇನೆ. ಅವರಿಗೂ ನಾನು ಇದನ್ನು ಹೇಳಿದ್ದೇನೆ. ಅಕ್ಷಯ್ ಕುಮಾರ್ಗೆ ಬೈಯ್ದಿದ್ದೇನೆ. ಅವರು ಆರೋಗ್ಯದ ಬಗ್ಗೆ ಕಾಳಜಿ ಇರುವ ಮನುಷ್ಯ. ಶಾರುಖ್ ಖಾನ್, ಅಜಯ್ ದೇವಗನ್ ಜೊತೆ ಅವರು ಈ ಜಾಹೀರಾತು ಮಾಡಿದ್ದಾರೆ. ಇಂಥ ಜಾಹೀರಾತುಗಳ ಮೇಲೆ ಕೋಟ್ಯಂತರ ರೂಪಾಯಿ ಸುರಿಯಲಾಗುತ್ತದೆ. ಇದರಿಂದ ಜನರಿಗೆ ನೀವು ಏನು ಕಲಿಸುತ್ತಿದ್ದೀರಿ? ತಾವು ಪಾನ್ ಮಸಾಲಾ ಮಾಡುತ್ತಿಲ್ಲ, ಅಡಿಕೆ ಪುಡಿ ಮಾರುತ್ತೇವೆ ಎನ್ನುತ್ತಾರೆ. ಆದರೆ ತಾವು ಮಾಡುತ್ತಿರುವುದು ಏನು ಅಂತ ಅವರಿಗೂ ಗೊತ್ತಿದೆ’ ಎಂದು ಮುಖೇಶ್ ಖನ್ನಾ ಹೇಳಿದ್ದಾರೆ.
‘ನೀವು ಕಿಂಗ್ಫಿಶರ್ ಜಾಹೀರಾತು ಮಾಡಿದ್ದೀರಿ ಎಂದರೆ ಕಿಂಗ್ಫಿಶರ್ ಬಿಯರ್ ಮಾರುತ್ತಿದ್ದೀರಿ ಅಂದರ್ಥ. ಅದು ಎಲ್ಲರಿಗೋ ಗೊತ್ತು. ಇವರೆಲ್ಲ ಯಾಕೆ ಇಂತ ಜಾಹೀರಾತು ಮಾಡುತ್ತಾರೆ? ಇವರ ಬಳಿ ಹಣ ಇಲ್ಲವೇ? ನಿಮ್ಮ ಬಳಿ ಸಾಕಷ್ಟು ಹಣ ಇದೆ, ಇಂಥದ್ದೆಲ್ಲ ಮಾಡಬೇಡಿ ಎಂದು ಆ ನಟರಿಗೂ ನಾನು ಹೇಳಿದ್ದೇನೆ. ಕೆಲವು ನಟರು ಅದರಿಂದ ಹೊರಗೆ ಬಂದಿದ್ದಾರೆ. ಅಂಥವರ ಪೈಕಿ ಅಕ್ಷಯ್ ಕುಮಾರ್ ಒಬ್ಬರು. ನನ್ನ ಮಾಹಿತಿ ಸರಿಯಾಗಿದ್ದರೆ ಅಮಿತಾಭ್ ಬಚ್ಚನ್ ಕೂಡ ಹೊರಬಂದಿದ್ದಾರೆ. ಈಗಲೂ ಇಂಥ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದೆ. ಜನರು ಬಾಯಲ್ಲಿ ಹೇಳಿ ಕೇಸರಿ ಎನ್ನುತ್ತಿದ್ದಾರೆ. ನೀವು ಜನರಿಗೆ ಗುಟ್ಕಾ ತಿನ್ನುವುದನ್ನು ಕಲಿಸುತ್ತಿದ್ದೀರಿ’ ಎಂದು ಮುಖೇಶ್ ಖನ್ನಾ ಖಡಕ್ ಆಗಿ ಹೇಳಿದ್ದಾರೆ.
ಈ ಮೊದಲು ಮುಖೇಶ್ ಖನ್ನಾ ಅವರಿಗೂ ಇಂಥ ಜಾಹೀರಾತುಗಳ ಆಫರ್ ಬಂದಿತ್ತು. ಆದರೆ ಅವರು ಅದನ್ನು ತಿರಸ್ಕರಿಸಿದರು. ‘ಶಕ್ತಿಮಾನ್’ ಧಾರಾವಾಹಿ ಮೂಲಕ ದೇಶಾದ್ಯಂತ ಸೂಪರ್ ಹೀರೋ ಇಮೇಜ್ ಗಳಿಸಿದ ನಟ ಇದೀಗ ಮಕ್ಕಳ ನೆಚ್ಚಿನ ನಟನಾಗಿದ್ದಾರೆ.