ತುಮಕೂರು:– ಕಲ್ಪತರು ನಾಡಿನಲ್ಲಿ ಅತ್ಯಂತ ಸಣ್ಣ ಗಾತ್ರದ ವಿಕಾರಿ ಹಾವು ಪತ್ತೆಯಾಗಿದೆ. ಭಾರತದ 60 ಪ್ರಭೇದಗಳಲ್ಲಿ ವಿಷಯುಕ್ತ ಹವಳದ ಹಾವು ಇದಾಗಿದೆ.
ತುಮಕೂರು ಜಿಲ್ಲೆ ಶಿರಾದ ಬುಕ್ಕಾಪಟ್ಟಣ ವನ್ಯ ಜೀವಿ ಧಾಮದಲ್ಲಿ ಹಾವು ಕಾಣಿಸಿಕೊಂಡಿದೆ.
ವನ್ಯಜೀವಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಹಾಗೂ ತಂಡದಿಂದ ಪತ್ತೆ ಹಚ್ಚಲಾಗಿದೆ.
ಹವಳದ ಹಾವು ಸುಮಾರು 30 ರಿಂದ 40 ಸೆ.ಮೀ. ವರೆಗೆ ಬೆಳೆಯುವ ಸಾಮರ್ಥ್ಯ ಹೊಂದಿದೆ. ದೇಹ ತಲೆಯಿಂದ ಬಾಲದ ವರೆಗೆ ತೆಳಗ್ಗೆ ಸಿಲಿಂಡರ್ ಆಕಾರದಲ್ಲಿ ಏಕರೂಪವಾಗಿದೆ. ದೇಹದ ಮೇಲ್ಮೈ ಕಂದು ಬಣ್ಣ ಹೊಂದಿದ್ದರೆ ಕೆಳ ಭಾಗ ಹಳದಿ ಮಿಶ್ರಿತ ಕಿತ್ತಳೆ ಬಣ್ಣದಿಂದ ಕೂಡಿದೆ. ತಲೆ ಮತ್ತು ಕುತ್ತಿಗೆ ಕಪ್ಪು ಬಣ್ಣ ಹಾಗೂ ಸಣ್ಣ ಕಣ್ಣುಗಳನ್ನು ಒಳಗೊಂಡಿದೆ. ಬಾಲದ ತುದಿ ಮೊಂಡಾಗಿದ್ದು ಎರಡು ಕಪ್ಪು ಬಣ್ಣದ ಗೆರೆಗಳನ್ನು ಹೊಂದಿದೆ
ದಖ್ಖನ್ ಪ್ರಸ್ಥಭೂಮಿಯ ತೇವ ಭರಿತ ಎಲೆ ಉದುರುವ ಕಾಡುಗಳಲ್ಲಿ ಮಾತ್ರ ಕಾಣಿಸೋ ಅಪರೂಪದ ಹಾವು ಇದಾಗಿದೆ ಎನ್ನಲಾಗಿದೆ