ಚಿತ್ರದುರ್ಗ:- ಚಿತ್ರದುರ್ಗದಲ್ಲಿ ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದಾರೆ.
38 ವರ್ಷದ ಮಂಜುನಾಥ ಮೃತರು. ಕಳೆದ ಎರಡು ವರ್ಷಗಳ ಹಿಂದೆ ಚೇತನ ಜೊತೆ ಮಂಜುನಾಥ್ ವಿವಾಹ ವಾಗಿದ್ದ. ಕೌಟುಂಬಿಕ ಕಲಹದ ಹಿನ್ನಲೆ ಪತಿಗೆ ಚೇತನ ಕಿರುಕುಳ ನೀಡುತ್ತಿದ್ದರು ಎಂದುಪತ್ನಿ ಚೇತನಾ ವಿರುದ್ದ ಮಂಜುನಾಥ್ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಪತಿ ಮುಂಜುನಾಥ್ ವಿರುದ್ದ ಮಹಿಳಾ ಠಾಣೆಗೆ ಪತ್ನಿ ಚೇತನ ದೂರು ಕೊಟ್ಟಿದ್ದರು. ಇದರಿಂದ ಮನನೊಂದು ಮನೆಯಲ್ಲಿ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ