ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಹಾಗೂ ಫೋಟೋ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ಭೀಕರವಾಗಿ ಹತ್ಯೆ ಮಾಡಿದ್ದರು. ಪ್ರಕರಣ ಸಂಬಂಧ 17 ಜನರನ್ನು ಬಂಧಿಸಿರುವ ಪೊಲೀಸರು ಸಾಕಷ್ಟು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ದರ್ಶನ್ ಜೈಲು ಸೇರಿ 50 ದಿನ ಕಳೆದಿದ್ದು ಸದ್ಯಕ್ಕೆ ಹೊರ ಬರುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಸದ್ಯ ಚಾರ್ಜ್ಶೀಟ್ ಸಲ್ಲಿಸಲು ಮುಂದಾಗಿರುವ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಫೋನ್ ಕಾಲ್ ಡಿಟೈಲ್ಸ್ ಕಲೆ ಹಾಕಿದ್ದಾರೆ.
ಕೊಲೆ ಕೇಸ್ ನಿಂದ ದರ್ಶನ್ ರನ್ನು ಹೊರ ತರಲು ಪತ್ನಿ ವಿಜಯಲಕ್ಷ್ಮಿ ಸಾಕಷ್ಟ ಕಷ್ಟ ಪಡುತ್ತಿದ್ದಾರೆ. ದೇವಸ್ಥಾನ, ರಾಜಕಾರಣಿಗಳು ಎಂದು ಸುತ್ತಾಡುತ್ತಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಪೊಲೀಸರು ರೇಣುಕಾಸ್ವಾಮಿ ಹಂತಕರಿಗೆ ಶಿಕ್ಷೆ ಕೊಡಿಸಲು ಪಣತೊಟ್ಟಿದ್ದು ಅದಕ್ಕೆ ಬೇಕಾದ ಸಾಕ್ಷ್ಯ ಸಂಗ್ರಹ ಮಾಡ್ತಿದ್ದಾರೆ.
ದಿನದಿಂದ ದಿನಕ್ಕೆ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಒಂದೊಂದು ಸಾಕ್ಷ್ಯಗಳು ಪೊಲೀಸರ ಕೈ ಸೇರ್ತಿವೆ. ಪ್ರಕರಣದಲ್ಲಿ ಸಿಸಿಟಿವಿ ದೃಶ್ಯ, ದರ್ಶನ್ ಬಟ್ಟೆ ಮೇಲೆ ಸಿಕ್ಕಿರೋ ರಕ್ತದ ಕಲೆ ಹೀಗೆ ಆರೋಪಿಗಳ ವಿರುದ್ಧ ಪೊಲೀಸರು ನೂರಾರು ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ.. ಸದ್ಯ ಟೆಕ್ನಿಕಲ್ ಎವಿಡೆನ್ಸ್ಗಳನ್ನು ಕಲೆ ಹಾಕಲು ಮುಂದಾಗಿರುವ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳ ಫೋನ್ ಕಾಲ್ ಪರಿಶೀಲನೆ ನಡೆಸಿದ್ದಾರೆ.
ದರ್ಶನ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಇದುವರೆಗೂ 400ಕ್ಕೂ ಹೆಚ್ಚು ಪೋನ್ ಕಾಲ್ ಪರಿಶೀಲನೆ ನಡೆಸಿದ್ದಾರೆ.. ಕೃತ್ಯಕ್ಕೂ ಮುನ್ನಾ ಕೃತ್ಯದ ನಂತರ ಆರೋಪಿಗಳು ಪರಸ್ಪರ ಮಾತನಾಡಿರೋ ಪೋನ್ ಕಾಲ್ ಮಾಹಿತಿಯನ್ನ ಕಲೆ ಹಾಕಿದ್ದಾರೆ.. ಕೇವಲ ಫೋನ್ ಕಾಲ್ ಮಾತ್ರವಲ್ಲದೇ ಆರೋಪಿಗಳು ವಾಟ್ಸಾಪ್ನಲ್ಲೂ ನೂರಾರು ಕರೆ ಮಾಡಿದ್ದಾರೆ, ಕೃತ್ಯದ ನಂತರ ಬಂಧಿತ ಆರೋಪಿಗಳು ಐವತ್ತಕ್ಕೂ ಹೆಚ್ಚು ಮಂದಿ ಜೊತೆ ಮಾತುಕತೆ ನಡೆಸಿದ್ದಾರೆ.. ಆರೋಪಿಗಳು ಖುದ್ದು ದರ್ಶನ್ ಜೊತೆಯೂ ಮಾತುಕತೆ ನಡೆಸಿರೋದು ಸಿಡಿಆರ್ನಲ್ಲಿ ಬಹಿರಂಗವಾಗಿದೆ.. ಸಿಡಿಆರ್ ಆಧಾರದ ಮೇಲೆ ಪೊಲೀಸರು ಐವತ್ತಕ್ಕೂ ಹೆಚ್ಚು ಜನರನ್ನ ವಿಚಾರಣೆ ನಡೆಸಿದ್ದಾರೆ.
ಪೊಲೀಸರು ಕೊಲೆ ಕೇಸ್ನಲ್ಲಿ ಬಂಧನಕೊಳಗಾಗಿರುವ 17 ಜನರ ಫೋನ್ ಕಾಲ್ ಪರಿಶೀಲನೆ ನಡೆಸಿದ್ದು, ಕೃತ್ಯದ ನಂತರ ಆರೋಪಿಗಳು ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಜೊತೆ ಬೇರೆ ಬೇರೆ ವಿಚಾರಗಳ ಬಗ್ಗೆ ಮಾತನಾಡಿರೋದು ಬಯಲಾಗಿದೆ.