ಉತ್ತರ ಪ್ರದೇಶ:- ಇಲ್ಲಿನ ಫಿರೋಜಾಬಾದ್ ಜಿಲ್ಲೆಯಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಗುಪ್ತಾಂಗದೊಳಗೆ ಚಪಾತಿ ಮಾಡುವ ಲಟ್ಟಣಿಗೆ ತೂರಿಸಿ ಥಳಿಸಿ ಕೊಂದ ಘಟನೆ ಜರುಗಿದೆ.
ಆರೋಪಿ ಪತಿ ತನ್ನ ಸಹೋದರರೊಂದಿಗೆ ಸೇರಿ ಪತ್ನಿಯ ಮೇಲೆ ಇಂತಹ ಘೋರ ಕೃತ್ಯ ಎಸಗಿದ್ದಾನೆ. ಮಹಿಳೆಯ ಖಾಸಗಿ ಭಾಗಗಳ ಒಳಗೆ ಚಪಾತಿ ಮಾಡುವ ಲಟ್ಟಣಿಗೆ ತೂರಿಸಿದ್ದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ.
ಹಲ್ಲೆಯಿಂದಾಗಿ ಆಕೆಯ ದೇಹದಾದ್ಯಂತ ಅನೇಕ ಗಾಯಗಳ ಗುರುತುಗಳು ಸಹ ಇದ್ದವು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಲಟ್ಟಣಿಗೆ ಮಹಿಳೆಯ ಕರುಳಿನವರೆಗೂ ತಲುಪಿ ಹಾನಿಗೊಳಿಸಿದ್ದರಿಂದ ಆಕೆ ಸಾವನಪ್ಪಿದ್ದಾಳೆ ಎಂಬುದಾಗಿ ತಿಳಿಸಿದ್ದಾರೆ.
ಸುರ್ಜೀತ್ ಆರೋಪಿ ಪತಿ. ಸೋಮವಾರ ರಂದು ರಾತ್ರಿ ತನ್ನ 28 ವರ್ಷದ ಪತ್ನಿ ರೇಷ್ಮಾ ಅವರೊಂದಿಗೆ ಜಗಳವಾಡಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಆರೋಪಿ ಮೊದಲು ರೇಷ್ಮಾಳನ್ನು ಕಟ್ಟಿಹಾಕಿ ತನ್ನ ಸಹೋದರರೊಂದಿಗೆ ಮನೆಯಲ್ಲಿ ಥಳಿಸಿದ್ದಾನೆ. ಇದರಿಂದ ಆಕೆ ಸಾವನಪ್ಪಿದ್ದಾಳೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ಬಳಿಕ ಆತನ ಘೋರ ಕೃತ್ಯ ಬೆಳಕಿಗೆ ಬಂದಿದೆ.
ಕುಡಿದ ಮತ್ತಿನಲ್ಲಿದ್ದ ಆರೋಪಿ ತನ್ನ ಹೆಂಡತಿಯ ಖಾಸಗಿ ಭಾಗಗಳಿಗೆ ಲಟ್ಟಣಿಗೆ ಹಾಕಿ ಚಿತ್ರಹಿಂಸೆ ನೀಡಿ ಅವಳನ್ನು ಕಚ್ಚಿ ಮತ್ತು ಬೆಲ್ಟ್ನಿಂದ ಹೊಡೆದು ಕೊಂದಿದ್ದಾನೆ ಎಂಬುದು ತಿಳಿದು ಬಂದಿದೆ.