ಬೆಂಗಳೂರು: ಸಚಿವ ಸಹೋದ್ಯೋಗಿ ಮುನಿರತ್ನ ಅವರು ನಿರ್ಮಿಸುತ್ತಿರುವ ಉರಿಗೌಡ ನಂಜೇಗೌಡ ಸಿನಿಮಾದಲ್ಲಿ ನನ್ನ ಪಾತ್ರವೇನೂ ಇಲ್ಲ. ಅದಕ್ಕೆ ನಾನು ಚಿತ್ರಕತೆಯನ್ನೇನೂ ಬರೆಯುತ್ತಿಲ್ಲ” ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಲ್ಲೇಶ್ವರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, “ಟಿಪ್ಪುವನ್ನು ಕೊಂದ ವೀರಸೇನಾನಿಗಳಾದ ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ನನಗೆ ನೈಜ ಅಭಿಮಾನವಿದೆ. ಅವರ ಬಗ್ಗೆ ನಾನು ಇದುವರೆಗೂ ಆಡಿರುವ ಮಾತುಗಳಿಗೆ ನಾನು ಬದ್ಧನಾಗಿದ್ದೇನೆ. ಆದರೆ ಸಿನಿಮಾದ ಭಾಗವಾಗುತ್ತಿಲ್ಲ” ಎಂದು ಅವರು ಹೇಳಿದ್ದಾರೆ.
ಟಿಪ್ಪು ಸುಲ್ತಾನ್ ನಮಗೆ ವಿಲನ್. ಅವನು ನರಹಂತಕ ನಮಗೆ. ಉರಿಗೌಡ ನಂಜೇಗೌಡ ನಮಗೆ ಹೆಮ್ಮೆ. ಉರಿಗೌಡ ನಂಜೇಗೌಡ ಇದ್ದದ್ದು ಸತ್ಯ. ನಾವು ಎಂದೆಂದಿಗೂ ಟಿಪ್ಪುವನ್ನು ವಿರೋಧಿಸುತ್ತೇವೆ. ಇನ್ನೂ ಸುವರ್ಣ ಮಂಡ್ಯ ಪುಸ್ತಕ ಯಾರು ಬರೆದಿದ್ದು? ಆ ಪುಸ್ತಕದಲ್ಲಿ ಆ ಎರಡು ಹೆಸರು ಕಾಲ್ಪನಿಕಾನಾ. ವಿರೋಧ ಮಾಡುವವರು ಮಾಡ್ತಾರೆ. ಟಿಪ್ಪು ಸುಲ್ತಾನ್ ಫೋಟೋಗಳನ್ನು ತೆಗೆದುಕೊಂಡು ಹೋಗಿ ಅವ್ರ ಮನೆಯಲ್ಲಿ , ಕಾರುಗಳ ಮೇಲೆ ಅಂಟಿಸಿಕೊಳ್ಳಲಿ ಎಂದು ಹೇಳುವ ಮೂಲಕ ಹೆಚ್ಡಿಕೆಗೆ ಸಚಿವ ಅಶ್ವಥ್ ನಾರಾಯಣ್ ಟಾಂಗ್ ಕೊಟ್ಟಿದ್ದಾರೆ.