ಇಂದು ಮತ್ತು ನಾಳೆ ಕನ್ನಡ ಚಿತ್ರರಂಗದ ಏಳಿಗೆಗಾಗಿ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ಹಮ್ಮಿಕೊಳ್ಳಲಾಗಿದೆ. ರಾಕ್ ಲೈನ್ ವೆಂಕಟೇಶ್ ನೇತೃತ್ವದಲ್ಲಿ ಸುಮಾರು 8 ಮಂದಿ ಪುರೋಹಿತರು ಈ ಪೂಜೆ ನಡೆಸಿಕೊಡುತ್ತಿದ್ದಾರೆ. ಕನ್ನಡ ಚಿತ್ರರಂಗದ ನಟ, ನಟಿಯರು, ಕಲಾವಿದರು, ತಂತ್ರಜ್ಞರು ಸೇರಿದಂತೆ ಸುಮಾರು 600ಕ್ಕೂ ಅಧಿಕ ಮಂದಿ ಈ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.
ಕಲಾವಿದರ ಸಂಘದಲ್ಲಿ ನಡೆಯುತ್ತಿರುವ ಈ ಪೂಜೆ ಜೈಲು ಸೇರಿರುವ ದರ್ಶನಗಾಗಿ. ಅವರನ್ನು ಉಳಿಸಲು ಈ ಪೂಜೆ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬರ್ತಿದೆ. ಈ ಬಗ್ಗೆ ಮಾತನಾಡಿದ ಹಿರಿಯ ನಟಿ ಗಿರಿಜಾ ಲೋಕೇಶ್, ದರ್ಶನ್ ಉಳಿಸಲು ‘ಹೋಮ’ ಮಾಡಿದ್ರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ.
ದರ್ಶನ್ಗಾಗಿ ಹೋಮ ಮಾಡಿದ್ರೆ ತಪ್ಪೇನು? ಈಗ ದರ್ಶನ್ ಮೇಲೆ ಆರೋಪ ಬಂದಿದೆ ಅಂತ ಆತನನ್ನು ದೂರ ತಳ್ಳೋದು ತಪ್ಪು. ಆಳಿಗೊಂದು ಕಲ್ಲು ಹೊಡೆಯೋದು ಸರಿಯಲ್ಲ. ಇಡೀ ಸಮಗ್ರ ಇಂಡಸ್ಟ್ರಿ ಒಳಿತಿಗೆ ಮಾಡ್ತಿರೋ ಹೋಮ ಇದು ಎಂದಿದ್ದಾರೆ.
ದೊಡ್ಡಣ್ಣ ಹಾಗೂ ಅವರ ಪತ್ನಿ ಈ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಉಡುಪಿಯ ಖ್ಯಾತ ಜ್ಯೋತಿಷಿ ಪ್ರಕಾಶ್ ಅಣ್ಣಮ್ಮಯ್ಯ ನೇತೃತ್ವದಲ್ಲಿ ಹೋಮ ಹವನಗಳು ನಡೆಯುತ್ತಿವೆ. ಮೊದಲಿಗೆ ಗಣಪತಿ ಹೋಮ, ಮೃತ್ಯಂಜಯ ಹೋಮ, ಸರ್ಪ ಶಾಂತಿ, ಮುಂತಾದ ಹೋಮಗಳ ಮಂತ್ರಗಳ ಪಠಣ ಇರಲಿದೆ ಅನ್ನೋ ಮಾಹಿತಿ ಇದೆ. ಕನ್ನಡ ಚಿತ್ರರಂಗದಲ್ಲಿ ನಿರ್ವಿಘ್ನವಾಗಿ ಕೆಲಸಗಳು ಆಗಲಿ ಅಂತ ಪೂಜೆ ಮಾಡಲಾಗ್ತಿದೆ. ಈ ಶುಭ ಕಾರ್ಯಕ್ಕೆ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಸೇರಿ ಹಲವು ನಟ ನಟಿಯರಿಗೆ ಭಾಗಿ ಆಗಲಿದ್ದಾರೆ.