ಬೆಂಗಳೂರು: BPL ಕಾರ್ಡ್ ದಾರರಿಗೆ ಗುಡ್ ನ್ಯೂಸ್ ಕೊಡಲು ಮುಂದಾದ ರಾಜ್ಯ ಸರ್ಕಾರ ಸದ್ಯ 5 ಕೆಜಿ ಅಕ್ಕಿ ಬದಲಿಗೆ ಹಣ ವರ್ಗಾವಣೆ ಮಾಡುತ್ತಿದ್ದು, ಇನ್ನು ಮುಂದೆ ಎಣ್ಣೆ, ಬೇಳೆ, ಸಕ್ಕರೆ ಮತ್ತು ಇತರ ಆಹಾರ ಪದಾರ್ಥಗಳನ್ನು ಕೊಡಲು ರಾಜ್ಯಸರ್ಕಾರ ಚಿಂತನೆ ನಡೆಸಿದೆ.
ಅನ್ನ ಭಾಗ್ಯ ಯೋಜನೆಯಡಿ ದ 5 ಕೆ.ಜಿ ಅಕ್ಕಿಯ ದುಡ್ಡಿನ ಬದಲು ಬೇಳೆ, ಉಪ್ಪು ಸಕ್ಕರೆ ಹಾಗೂ ಎಣ್ಣೆ ನೀಡುವಂತೆ ನಾಶೇ 93ರಷ್ಟು ಫಲಾನುಭವಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಸಚಿವ ದ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಮಾಡಲು ಸಚಿವರು ಮುಂದಾಗಿದ್ದಾರೆ.
ರಾಜ್ಯ ಸರಕಾರ ನಡೆಸಿದ ಸಮೀಕ್ಷೆಯಲ್ಲಿ ಶೇ 93ರಷ್ಟು ಫಲಾನುಭವಿಗಳು ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯ ಬದಲಿಗೆ 5 ಕೆಜಿ ಅಕ್ಕಿ ಜತೆಗೆ ಇತರೆ ಅಗತ್ಯ ವಸ್ತುಗಳನ್ನು ಪಡೆಯಲು ಆಸಕ್ತಿ ತೋರಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ. ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದ್ದಾರೆ. ನವದೆಹಲಿಯಲ್ಲಿರುವ ಮುನಿಯಪ್ಪ ಮಂಗಳವಾರ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಪಡಿತರ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಹೀಗಾಗಿ ಈಗಾಗ್ಲೇ ಸರ್ವೇ ಮಾಡಿರುವ ಹಾಗೇ ಅಕ್ಕಿ ಬದಲು ಬೆಳೆ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆಇನ್ನು ಇಡೀ ರಾಜ್ಯದಲ್ಲಿ ಸರ್ವೇ ಮಾಡಲಾಗಿದೆ ಸರ್ವೇಯಲ್ಲಿ ಶೇಕಡಾ 93% ರಷ್ಟು ಜನರುಅಕ್ಕಿಯ ಜೊತೆಗೆ ಬೆಳೆ ಹಾಗೂ ಇನ್ನಿತರೇ ಸಾಮಗ್ರಿಗಳನ್ನು ಕೊಡಲು ಮನವಿ ಮಾಡಿದ್ದಾರೆಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯದ BPL ಕಾರ್ಡ್ ದಾರರಿಗೆ ಅಕ್ಕಿ ಜೊತೆಗೆ ಬೆಳೆ ಕೊಡಲಾಗುತ್ತೆಈಗಾಗ್ಲೇ ಇಡೀ ರಾಜ್ಯದಲ್ಲಿ ಸುಮಾರು 1.24ಕೋಟಿ BPL ಕಾರ್ಡ್ದಾರರು ಇದ್ದಾರೆ ಹೀಗಾಗಿ ಈ ಎಲ್ಲಾ ಕಾರ್ಡ್ದಾರರಿಗೆ ಇದ್ರಿಂದ ಪ್ರಯೋಜನ ಆಗಲಿದೆ