ಮುಂಬೈ:- ರೈಲು ಬೋಗಿಯಲ್ಲಿ ನಮಾಜ್ ಮಾಡಿದ ಮುಸ್ಲಿಂ ಪ್ರಯಾಣಿಕರನ್ನು ಟಿಟಿಇ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಇದು ಸಖತ್ ವೈರಲ್ ಆಗಿದೆ.
ಈ ವಿಡಿಯೊದಲ್ಲಿ, ರೈಲ್ವೆ ಟಿಟಿಇ ಬೋಗಿಯಲ್ಲಿ ನಡೆದಾಡುವ ಸ್ಥಳದಲ್ಲಿ ನಮಾಜ್ ಮಾಡಲು ಮುಂದಾದ ಮುಸ್ಲಿಂ ಪ್ರಯಾಣಿಕರನ್ನು ಬೈಯುತ್ತಿದ್ದಾರೆ. ರೈಲಿನಲ್ಲಿದ್ದ ಮುಸ್ಲಿಂ ಸಮುದಾಯದವರು ಬೋಗಿಯ ಮಧ್ಯದಲ್ಲಿ ನಡೆದಾಡುವ ಸ್ಥಳದಲ್ಲಿ ನಮಾಜ್ ಮಾಡಲು ತಯಾರಿ ನಡೆಸುತ್ತಿದ್ದಾರೆ. ಅದಕ್ಕಾಗಿ ಕುಳಿತುಕೊಳ್ಳಲು ಅವರು ದಾರಿಯಲ್ಲಿ ಪ್ಲಾಸ್ಟಿಕ್ ಅನ್ನು ಹಾಸುತ್ತಿದ್ದರು.
ಈ ಸಮಯದಲ್ಲಿ ಅಲ್ಲಿಗೆ ಬಂದ ಟಿಟಿಇ ಕೋಪಗೊಂಡು ಅವರಿಗೆ ತಮ್ಮ ಕುಳಿತುಕೊಳ್ಳುವ ಸೀಟಿನಲ್ಲಿ ನಮಾಜ್ ಮಾಡುವಂತೆ ಮತ್ತು ದಾರಿಯಿಂದ ಎದ್ದೇಳುವಂತೆ ತಿಳಿಸಿದ್ದಾರೆ. ಇದು ವಿಡಿಯೊದಲ್ಲಿ ಕಂಡು ಬಂದಿದೆ.
ಈ ರೈಲಿನಲ್ಲಿ ತಮಾಷೆಯಾಗಿ ವರ್ತಿಸಬೇಡಿ. ಈ ಮಾರ್ಗ ಇರುವುದು ನಡೆದಾಡಲು. ನಿಮಗೆ ನಮಾಜ್ ಮಾಡಲು ಅಲ್ಲ. ಇದರಲ್ಲಿ ನಮಾಜ್ ಮಾಡುವ ನಿಮ್ಮ ಮನಸ್ಥಿತಿಗೆ ಏನಾಗಿದೆ? ನಿಮ್ಮ ಈ ಆಲೋಚನೆಯನ್ನು ಬಿಟ್ಟುಬಿಡಿ. ನನ್ನ ರೈಲಿನಲ್ಲಿ ಇದು ಸಂಭವಿಸಲು ನಾನು ಅನುಮತಿಸುವುದಿಲ್ಲʼʼ ಎಂದು ಹೇಳಿದ್ದಾರೆ.
ಅಲ್ಲದೇ ತಮ್ಮ ಕಾರ್ಯಗಳಿಂದಾಗಿ ಇತರ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಮುಸ್ಲಿಂ ಪ್ರಯಾಣಿಕರಿಗೆ ತಿಳಿಸಿದ್ದಾರೆ. ಪ್ರಯಾಣಿಸುವ ರೈಲುಗಳಲ್ಲಿ ನಮಾಜ್ ಮಾಡಲು ಅನುಮತಿ ಇಲ್ಲ. ಒಂದು ವೇಳೆ ಪ್ರಯಾಣಿಕರು ಅವರು ಹೇಳುವುದನ್ನು ಅನುಸರಿಸದಿದ್ದರೆ, ರೈಲ್ವೆ ಪೊಲೀಸರಿಗೆ ಕರೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಾಗಾಗಿ ಮುಸ್ಲಿಂ ಪ್ರಯಾಣಿಕರು ತಮ್ಮ ಸೀಟಿನ ಬಳಿ ಹೋಗಿರುವುದು ವಿಡಿಯೊದ ಕೊನೆಯಲ್ಲಿ ಕಂಡು ಬಂದಿದೆ. ಕೆಲವರು ಟಿಟಿಇ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಎಲ್ಲರಿಗೂ ಕಾನೂನು ಒಂದೇ ಎಂದು ಇನ್ನು ಹಲವರು ತಿಳಿಸಿದ್ದಾರೆ.