ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿಂದು ವರುಣನ ಆರ್ಭಟ ಮುಂದುವರಿಯಲಿದೆ.ಮಲೆನಾಡಿನಲ್ಲಿ ಮತ್ತೆ ಮಳೆಯ ಪ್ರಮಾಣ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಭಾಗದಲ್ಲಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಹಾಗೂ ಗುಡುಗು ಸಹಿತ ಮಳೆ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶಿವಮೊಗ್ಗ, ತುಮಕೂರು, ಮೈಸೂರು, ಮಂಡ್ಯ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾವೇರಿ, ಗದಗ, ಧಾರವಾಡ, ಉತ್ತರ ಕನ್ನಡಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಕೋಲಾರ, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಕೊಪ್ಪ, ಅರಕಲಗೂಡು, ಕಳಸ, ಬೆಳ್ಳೂರು, ಕಮ್ಮರಡಿ, ಚಿಕ್ಕಮಗಳೂರು, ನಾಯಕನಹಟ್ಟಿ, ಬೇಲೂರು, ದಾವಣಗೆರೆ, ಹಳಿಯಾಳ, ಬರಗೂರು, ಕಡೂರು, ಪರಶುರಾಂಪುರ, ಹಿರೇಕೆರೂರು, ಕುಣಿಗಲ್, ನಾಪೋಕ್ಲು, ಹಾಸನ, ಕುಣಿಗಲ್, ಭದ್ರಾವತಿ, ಹಾವೇರಿ, ಕವಡಿಮಟ್ಟಿ, ನಾಗಮಂಗಲ, ಚಾಮರಾಜನಗರ, ಚಿತ್ರದುರ್ಗ, ದೊಡ್ಡಬಳ್ಳಾಪುರ, ತಿಪಟೂರು, ವಿರಾಜಪೇಟೆ, ನಾಗಮಂಗಲ, ಕುಶಾಲನಗರ, ಶ್ರವಣಬೆಳಗೊಳ, ಚನ್ನಗಿರಿ, ಹಾರಂಗಿ, ಬಾಳೆಹೊನ್ನೂರು, ಹರಪನಹಳ್ಳಿ, ಕೊಟ್ಟೂರಿನಲ್ಲಿ ಮಳೆಯಾಗಿದೆ. ಕಿರವತ್ತಿ, ಕೊಟ್ಟಿಗೆಹಾರ, ಸಿದ್ದಾಪುರ, ಧಾರವಾಡ, ಹಡಗಲಿ, ಆಗುಂಬೆ, ಸಿರಾ, ಕೃಷ್ಣರಾಜಪೇಟೆ, ಹುಂಚದಕಟ್ಟೆ, ಮಾಗಡಿ, ಕುಡತಿನಿ, ಮಧುಗಿರಿ, ದೇವನಹಳ್ಳಿಯಲ್ಲಿ ಮಳೆಯಾಗಿದೆ.