ಟಾಲಿವುಡ್ ಬ್ಯೂಟಿ ನಟಿ ಸಮಂತಾ ರುತ್ ಪ್ರಭು ಸಿನಿಮಾಗಳ ಜೊತೆಗೆ ವೈಯಕ್ತಿಕ ಕಾರಣಗಳಿಂದಲೂ ಸಖತ್ ಸುದ್ದಿಯಾಗ್ತಿರ್ತಾರೆ. ಇತ್ತೀಚೆಗೆ ಸಮಂತಾ ಮಾಜಿ ಪತಿ ನಾಗ ಚೈತನ್ಯ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಸಹಜವಾಗಿಯೇ ನಟಿಗೆ ನೋವುಂಟಾಗಿದೆ ಈ ಬೆನ್ನಲ್ಲೇ ಸಮಂತಾ ಬಗ್ಗೆ ಅಪಪ್ರಚಾರ ಮಾಡುವ ಕೆಲಸವೂ ನಡೆದಿದೆ. ಸಮಂತಾ ಅವರು ನಿರ್ದೇಶಕ ರಾಜ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತು. ಇದಕ್ಕೆ ಸಮಂತಾ ಅವರು ಖಡಕ್ ಆಗಿ ಉತ್ತರಿಸಿದ್ದಾರೆ. ಪರೋಕ್ಷವಾಗಿ ಅವರು ಈ ವಿಚಾರದ ಬಗ್ಗೆ ಸಮಂತಾ ಪ್ರತಿಕ್ರಿಯಿಸಿದ್ದಾರೆ.
ಸಮಂತಾ ಅವರು ಹೂಡಿ ಧರಿಸಿ ಪೋಸ್ ಕೊಟ್ಟಿದ್ದಾರೆ. ಈ ಹೂಡಿ ಮೇಲೆ ಅವರು ‘ಶಾಂತಿ ಸಂಗ್ರಹಾಲಯ’ ಎಂಬರ್ಥ ಬರೋ ಸಾಲುಗಳು ಬರೆದುಕೊಂಡಿದೆ. ಇದನ್ನು ಅನೇಕರು ನಾನಾ ರೀತಿಯಲ್ಲಿ ಬಣ್ಣಿಸುತ್ತಿದ್ದಾರೆ. ಯಾರು ಎಷ್ಟೇ ವದಂತಿ ಹಬ್ಬಿಸಿದರೂ ತಾವು ಕೂಲ್ ಆಗಿ ಇರೋದಾಗಿ ಅವರು ಹೇಳಿರಬಹುದು ಎಂದು ಅನೇಕರು ಊಹಿಸಿದ್ದಾರೆ.
ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಪಡೆದಿದ್ದಾರೆ. ಇದರ ಜೊತೆಗೆ ಅವರಿಗೆ ಒಂದಷ್ಟು ವೈರಿಗಳು ಕೂಡ ಹುಟ್ಟಿಕೊಂಡಿದ್ದಾರೆ. ನಾಗ ಚೈತನ್ಯ ಅವರಿಂದ ದೂರಾದ ತಕ್ಷಣ ಅವರನ್ನು ಒಂದಷ್ಟು ಮಂದಿ ದ್ವೇಷಿಸೋಕೆ ಪ್ರಾರಂಭಿಸಿದ್ದಾರೆ. ಈ ದ್ವೇಷದ ಹಿಂದಿನ ಉದ್ದೇಶ ಏನು ಎಂಬುದು ಸಮಂತಾ ಫ್ಯಾನ್ಸ್ಗೆ ಅರ್ಥ ಆಗುತ್ತಿಲ್ಲ. ಸಮಂತಾ ಬಗ್ಗೆ ಅವರು ಇಲ್ಲ-ಸಲ್ಲದ ಆರೋಪ ಹೊರಿಸುತ್ತಾ ಬರುತ್ತಿದ್ದಾರೆ.
ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್’ ಸರಣಿಯ ನಿರ್ದೇಶಕ ರಾಜ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿತ್ತು. ಇದರ ಹಿಂದೆ ಯಾರಿದ್ದಾರೆ? ಈ ವದಂತಿಯನ್ನು ಹಬ್ಬಿಸಿದವರು ಯಾರು ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ. ಸಮಂತಾ ಹೆಸರನ್ನು ಹಾಳು ಮಾಡಲು ಯಾರೋ ಮಾಡಿದ ಕುತಂತ್ರ ಇದು ಎಂದು ಅನೇಕರು ಊಹಿಸಿದ್ದಾರೆ.