ವಿಜಯನಗರ:- ತುಂಗಭದ್ರಾ ಡ್ಯಾಂ ನಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಮೊದಲ ಪ್ರಯತ್ನ ಫೇಲ್ ಆಗಿದ್ದು, ಇಂದಾದ್ರೂ ಗೇಟ್ ಅಳವಡಿಕೆ ಆಗುತ್ತಾ ಎಂಬ ಕುತೂಹಲ, ಕಾತುರ ಎಲ್ಲರಲ್ಲೂ ಮನೆ ಮಾಡಿದೆ.
ಸ್ಟಾಪ್ ಲಾಗ್ ಗೇಟ್ನ ಮೊದಲ ಎಲಿಮೆಂಟ್ ಅಳವಡಿಸಲು ಹರಸಾಹಸ ಪಡಲಾಗುತ್ತಿದೆ.
ಹರಿಯುವ ನೀರಿನಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಸವಾಲು ಎದುರಾಗಿದ್ದು, ಎಷ್ಟೇ ಪ್ರಯತ್ನ ಮಾಡಿದ್ರೂ ಸ್ಟಾಪ್ ಲಾಗ್ ಗೇಟ್ ಅಳವಡಿಕೆಗೆ ವಿಳಂಬವಾಗ್ತಿದೆ.
ನಿನ್ನೆ ಮಧ್ಯಾಹ್ನದಿಂದ 2 ಕ್ರೇನ್ಗಳ ಮೂಲಕ ಸ್ಟಾಪ್ ಲಾಗ್ ಅಳವಡಿಕೆಗೆ ಎಷ್ಟೇ ಪ್ರಯತ್ನ ಮಾಡಿದರೂ ಒಂದು ಎಲಿಮೆಂಟ್ ಅಳವಡಿಸಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಹೀಗಾಗಿ 60 ಟನ್ ಭಾರದ ಗೇಟನ್ನು ಇಬ್ಬಾಗ ಮಾಡಿ ಕೆಳಗೆ ಇಳಿಸಿ ಆಮೇಲೆ ವೆಲ್ಡಿಂಗ್ ಮಾಡಿ ಗೇಟ್ ಅಳವಡಿಕೆ ಕಾರ್ಯ ಮುಂದುವರಿಸಲಾಗುತ್ತದೆ.
ಇನ್ನು, ನಿನ್ನೆ ಡ್ಯಾಂಗೆ ಭೇಟಿ ನೀಡಿ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವ ಜಮೀರ್ ಅಹಮ್ಮದ್ ಅವರು, ಒಳ್ಳೇಯ ಕೆಲಸ ಮಾಡಿ ಎಲ್ಲರಿಗೂ ಒಳ್ಳೇಯ ಬಕ್ಷಿಸ್ ಕೊಡುತ್ತೀನಿ. ನಾಳೆ ನಮಾಜ್ ಮಾಡಿ ಇಲ್ಲಿಗೆ ಇರುತ್ತೇನೆ ಎಲ್ಲರಿಗೂ 50 ಸಾವಿರ ಕೊಡುತ್ತೇನೆ ಅಂತ ತುಂಗಭದ್ರಾ ಕ್ರಸ್ಟ್ ಕಾಮಗಾರಿಯಲ್ಲಿ ಭಾಗಿಯಾಗಿರುವ ತಂತ್ರಜ್ಞರಿಗೆ ಬಕ್ಷಿಸ್ ನೀಡುವುದಾಗಿ ಭರವಸೆ ನೀಡಿದರು.
ಕಾಮಗಾರಿ ನಡೆಯುವುದನ್ನು ಪರಿಶೀಲಿಸಿದ ಸಚಿವ ಜಮೀರ್, ತಾಂತ್ರಿಕ ತಜ್ಞ ಕನ್ನಯ್ಯ ನಾಯ್ಡು ರಿಂದ ಕಾಮಗಾರಿ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಗೇಟ್ ಅಳವಡಿಕೆಯಲ್ಲಿ ಭಾಗಿಯಾಗಿರುವ ತಂತ್ರಜ್ಞರೊಂದಿಗೆ ಮಾತನಾಡಿ ಚೆನ್ನಾಗಿ ಕೆಲಸ ಮಾಡಲು ಹುರಿದುಂಬಿಸಿದರು.
ಕೇವಲ ಆರು ದಿನದಲ್ಲಿ 27 ಡಿಎಂಸಿಗೂ ಹೆಚ್ಚು ನೀರು ಸುಖಾಸುಮ್ಮನೆ ವ್ಯರ್ಥವಾಗಿದೆ. 19ನೇ ಗೇಟ್ನಲ್ಲೇ ತುಂಗಾಭದ್ರೆ ಅಪ್ಪಳಿಸಿ ಬರ್ತಿರೋದ್ರಿಂದ ಹೊಸ ಗೇಟ್ ಹಾಕೋದಕ್ಕೂ ಸಾಧ್ಯವಾಗ್ತಿಲ್ಲ. ಒಂದ್ಕಡೆ ನೀರು ಪೋಲಾಗೋದಕ್ಕೆ ತಪ್ಪಿಸೋ ಸವಾಲು. ಇನ್ನೊಂದ್ಕಡೆ ಆದಷ್ಟು ಬೇಗ ಗೇಟ್ ಕ್ಲೋಸ್ ಮಾಡ್ಬೇಕು ಅನ್ನೋ ಚಾಲೆಂಜ್. ಹೀಗಾಗಿ ಡ್ಯಾಂ ತಜ್ಞ ಕನ್ಹಯ್ಯ ಆಯಂಡ್ ಶತಾಯಗತಾಯ ಪ್ರಯತ್ನ ಪಡ್ತಿದೆ.