ಪ್ಯೂ ಥಾಯ್ ಪಕ್ಷವು ತನ್ನ ಅಧ್ಯಕ್ಷ ಪೆಟೊಂಗ್ಟಾರ್ನ್ ಶಿನವಾತ್ರಾ ಅವರನ್ನು ಥೈಲ್ಯಾಂಡ್ ಹೊಸ ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡುವುದಾಗಿ ಘೋಷಿಸಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಸೊರವಾಂಗ್ ಟಿಯೆನ್ ಥಾಂಗ್ ತಮ್ಮ ನಾಮನಿರ್ದೇಶನವನ್ನು ಘೋಷಿಸಿದ ಕೂಡಲೇ, ಜನಪ್ರಿಯ ಫು ಥಾಯ್ ನೇತೃತ್ವದ 11 ಪಕ್ಷಗಳ ಒಕ್ಕೂಟದ ನಾಯಕರು ಅವರಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಪೆಟೊಂಗ್ಟಾರ್ನ್ ಶಿನವಾತ್ರಾ ಅವರು ಸಮ್ಮಿಶ್ರ ಪಾಲುದಾರರಿಗೆ ಧನ್ಯವಾದ ಹೇಳಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಪ್ರಧಾನಿ ಶ್ರೆಟ್ಟಾ ತವಿಸ್ ಅವರನ್ನು ಸಾಂವಿಧಾನಿಕ ನ್ಯಾಯಾಲಯ ಬುಧವಾರ ಅಧಿಕಾರದಿಂದ ವಜಾಗೊಳಿಸಿದೆ. ಶೆಟ್ಟಾ ತವಿಸ್ ಕೇವಲ ಒಂದು ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದರು.