ಬೆಂಗಳೂರು: ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಯವು 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಕನ್ನಡ ಚಿತ್ರರಂಗಕ್ಕೆ ವರಮಹಾಲಕ್ಷ್ಮಿ ಹಬ್ಬ ಗಿಫ್ಟ್ ಆಗಿ ಕನ್ನಡಕ್ಕೆ 7 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿದ್ದು ರಾಷ್ಟ್ರೀಯ ಪ್ರಶಸ್ತಿ ಅಖಾಡದಲ್ಲಿ ಪ್ಯಾನ್ ಇಂಡಿಯನ್ ಕನ್ನಡ ಚಿತ್ರಗಳ ಭರಾಟೆ
ಪ್ರಶಸ್ತಿ ರಂಗದಲ್ಲೂ ಗೆದ್ದು ಬೀಗಿದ ಕನ್ನಡ ಸಿನಿಮಾಗಳು ಕನ್ನಡಕ್ಕೆ ನಾಲ್ಕನೇ ಬಾರೀ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದ್ದು ಹಾಗೆ ಈ ವರ್ಷ ದೇಶದಾದ್ಯಂತ ಹಲವು ಭಾಷೆಗಳ ಸಿನಿಮಾಗಳು ಪ್ರಶಸ್ತಿಗಾಗಿ ಸೆಣೆಸಾಟದಲ್ಲಿದ್ದವು.
ಕಾಂತಾರ’, ‘ಕೆಜಿಎಫ್ 2’ ಸೇರಿದಂತೆ ಇನ್ನೂ ಕೆಲವು ಉತ್ತಮ ಕನ್ನಡ ಸಿನಿಮಾಗಳು ಈ ಬಾರಿ ರಾಷ್ಟ್ರೀಯ ಪ್ರಶಸ್ತಿಗಾಗಿ ವಿವಿಧ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಿದ್ದವು. ರಿಷಬ್ ಶೆಟ್ಟಿಗೆ ಅವರಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರಕಿದೆ. ‘ಕಾಂತಾರ’ದ ಅತ್ಯುತ್ತಮ ನಟನೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಕನ್ನಡದ ‘ತಬರನ ಕತೆ’ ಸಿನಿಮಾದಲ್ಲಿ ನಟಿಸಿದ್ದ ತಮಿಳು ನಟ ಚಾರುಹಾಸನ್ಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿದೆ
ನಟನಾ ವಿಭಾಗದಲ್ಲಿ ರಿಷಬ್ ಶೆಟ್ಟಿ ಮ್ಯಾಜಿಕ್ ಮಾಡಿದ್ದು ಮಳೆಯಾಳಂ ಮುಮ್ಮುಟ್ಟಿಯನ್ನೇ ಹಿಂದಿಟ್ಟ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಮೊದಲ ನ್ಯಾಷನಲ್ ಅವಾರ್ಡ್ ಹೊಂಬಾಳೆ ಫಿಲಂಸ್ ನಲ್ಲೇ ಕೆಜಿಎಫ್ ಹಾಗೂ ಕಾಂತಾರ ನಿರ್ಮಾಣ ರಿಷಬ್ ಕ್ಲೈಮ್ಯಾಕ್ಸ್ ನಟನೆಗೆ ಚಿತ್ರಮಂದಿರಗಳಲ್ಲಿ ಶಿಳ್ಳೆ ಸಿಕ್ಕಿತ್ತು ಇದೀಗ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.