ಆಗಸ್ಟ್ 16ರಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಿಸಿದೆ. ಫೀಚರ್ ಸಿನಿಮಾಗಳು ಮಾತ್ರವಲ್ಲದೆ ಡಾಕ್ಯುಮೆಂಟರಿ, ಕಿರುಚಿತ್ರ, ಅನಿಮೇಟೆಡ್ ಸಿನಿಮಾ, ಆರ್ಟ್ ಸಿನಿಮಾ ಇನ್ನಿತರೆ ಮಾದರಿಯ ಸಿನಿಮಾಗಳಿಗೆ ನಾನ್ ಫೀಚರ್ ಕ್ಯಾಟಗರಿ ಅಡಿಯಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ನಾನ್ ಫೀಚರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಿನಿಮಾಗಳ ಪಟ್ಟಿ ಇಲ್ಲಿದೆ.
ನಾನ್ ಫೀಚರ್ ಫಿಲಂ ಕ್ಯಾಟಗರಿಯಲ್ಲಿ 17 ಭಾಷೆಗಳ 130 ಸಿನಿಮಾಗಳು ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದವು. ನಾನ್ ಫೀಚರ್ ಸಿನಿಮಾ ವಿಭಾಗದಲ್ಲಿ 18 ಕ್ಯಾಟಗರಿಯಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದ್ದು, ಪ್ರತಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಿನಿಮಾ, ತಂತ್ರಜ್ಞರು, ನಟ-ನಟಿಯರ ಹೆಸರು ಇಲ್ಲಿದೆ.
ವಿಶೇಷ ಪ್ರಶಸ್ತಿ: ಬಿರುಬಾಲ (ಅಸ್ಸಾಮಿ), ಹಾರ್ಗಿಲ (ಅಸ್ಸಾಮಿ)
ಅತ್ಯುತ್ತಮ ಚಿತ್ರಕತೆ: ಕೌಶಿಕ್ ಸರ್ಕಾರ್ (ಮೊನೊ ನೊ ಅವೇರ್)
ಅತ್ಯುತ್ತಮ ನರೇಷನ್: ಸುಮಂತ್ ಶಿಂಧೆ (ಮರ್ಮರ್ಸ್ ಆಫ್ ಜಂಗಲ್) ಮರಾಠಿ ಡಾಕ್ಯುಮೆಂಟರಿ
ಅತ್ಯುತ್ತಮ ಸಂಗೀತ: ವಿಶಾಲ್ ಭಾರಧ್ವಜ (ಫುರ್ಸತ್)
ಅತ್ಯುತ್ತಮ ಎಡಿಟಿಂಗ್ : ಸುರೇಶ್ ಅರಸ್ (ಮಧ್ಯಂತರ) ಕನ್ನಡ ಕಿರುಚಿತ್ರ
ಅತ್ಯುತ್ತಮ ಶಬ್ದ ವಿನ್ಯಾಸ: ಮಾನಸ ಚೌಧರಿ (ಯಾನ) ಹಿಂದಿ/ ಮಾಲ್ವಿ
ಅತ್ಯುತ್ತಮ ಸಿನಿಮಾಟೊಗ್ರಫಿ: ಸಿದ್ಧಾರ್ಥ್ ದಿವಾನ್ (ಮೊನೊ ನೊ ಅವೇರ್) ಹಿಂದಿ/ ಇಂಗ್ಲೀಷ್
ಅತ್ಯುತ್ತಮ ನಿರ್ದೇಶಕ: ಮಿರಿಯಮ್ ಚಾಂಡಿ ಮೆನಚೆರಿ (ಫ್ರಂ ದಿ ಶಾಡೊ) ಬೆಂಗಾಲಿ
ಅತ್ಯುತ್ತಮ ಕಿರುಚಿತ್ರ (30 ನಿಮಿಷ): ಶುನ್ಯುತ (ಅಸ್ಸಾಮಿ)
ಅತ್ಯುತ್ತಮ ಅನಿಮೇಟೆಡ್ : ಎ ಕೊಕೊನೆಟ್ ಟ್ರೀ (ಮೂಕಿ ಸಿನಿಮಾ)
ಸಾಮಾಜಿ ಸಂದೇಶ ನೀಡುವ ಅತ್ಯುತ್ತಮ ಸಿನಿಮಾ: ಗರಿಯಾಲ್-ಇಂಗ್ಲೀಷ್ (ಆಕಾಂಕ್ಷಾ ಸೂದ್ ಸಿಂಗ್)
ಅತ್ಯುತ್ತಮ ಡಾಕ್ಯುಮೆಂಟರಿ: ಮರ್ಮಸ್ ಆಫ್ ದಿ ಜಂಗಲ್ (ಮರಾಠಿ)
ಅತ್ಯುತ್ತಮ ಕಲಾ ಮತ್ತು ಸಂಸ್ಕೃತಿ ಸಿನಿಮಾ: ರಂಗ ವೈಭವ-ಕನ್ನಡ, ವರ್ಸ-ಮರಾಠಿ
ಅತ್ಯುತ್ತಮ ಐತಿಹಾಸಿಕ ಸಿನಿಮಾ: ಅನಾಕಿ ಏಕ್ ಮಹೆಂಜೊದಾರೊ (ಮರಾಠಿ)
ಅತ್ಯುತ್ತಮ ಹೊಸ ನಿರ್ದೇಶಕ: ಬಸ್ತಿ ದಿನೇಶ್ ಶೆಣೈ (ಮಧ್ಯಂತರ-ಕನ್ನಡ)
ಅತ್ಯುತ್ತಮ ನಾನ್ ಫೀಚರ್ ಸಿನಿಮಾ: ಆಯ್ನ (ಉರ್ದು)
ಸಿನಿಮಾ ಬರವಣಿಗೆ
ಅತ್ಯುತ್ತಮ ಸಿನಿಮಾ ವಿಮರ್ಶೆ: ದೀಪಕ್ ದುವಾ (ಹಿಂದಿ)
ಅತ್ಯುತ್ತಮ ಸಿನಿಮಾ ಪುಸ್ತಕ: ಕಿಶೋರ್ ಕುಮಾರ್ (ಅನಿರುದ್ಧ ಭಟ್ಟಾಚಾರ್ಯ) ಅವರುಗಳಿಗೆ ಪ್ರಶಸ್ತಿ ನೀಡಲಾಗಿದೆ.