ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೆಟ್ಟದಮಾದಳ್ಳಿ ಗ್ರಾಮದ ಯುವ ನಿರ್ದೇಶಕ ಬದ್ರಿ ಬಿ.ಎಂ.ಹಳ್ಳಿ ಅವರ ಆಲ್ಬಂ ಹಾಡಿಗೆ ಪುನೀತ್ ರಾಜ್ಕುಮಾರ್ ಹೆಸರಿನ ರಾಜರತ್ನ ಪ್ರಶಸ್ತಿ ದೊರೆತಿದೆ.
ಹುಬ್ಬಳ್ಳಿಯಲ್ಲಿ ಮೂರು ದಿನಗಳ ಕಾಲ ನಡೆದ ಕರ್ನಾಟಕ ಚಲನಚಿತ್ರೋತ್ಸವ ಪ್ರಶಸ್ತಿ ಸಮಾರಂಭದಲ್ಲಿ ನೂರಾರು ಆಲ್ಬಂ ಹಾಡಿನ ಪೈಕಿ ಬದ್ರಿ ಅವರ ಈ ಪ್ರೀತಿನೇ ಒಂಥರಾ ಎಂಬ ಆಲ್ಬಂ ಹಾಡಿಗೆ ಅತ್ಯುತ್ತಮ ಯುವ ನಿರ್ದೇಶಕ ಎಂದು ಬದ್ರಿ ಬಿ.ಎಂ.ಹಳ್ಳಿಗೆ ರಾಜರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.