ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಭೈರತಿ ರಣಗಲ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಮಧ್ಯೆ ಶಿವಣ್ಣನ 131ನೇ ಸಿನಿಮಾಗೆ ಚಾಲನೆ ಸಿಕ್ಕಿದೆ. ವರಮಹಾಲಕ್ಷ್ಮೀ ಹಬ್ಬದ ಶುಭದಿನದಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ.
ಬಳಿಕ ಮಾತನಾಡಿದ ಶಿವಣ್ಣ, 2 ವರ್ಷಗಳ ಹಿಂದೆ ಚಿತ್ರತಂಡ ಕಥೆ ಹೇಳಿದ್ದರು. ಯಾಕೆ ಇಷ್ಟು ಲೇಟ್ ಎಂದು ಕೇಳಬೇಡಿ. ಮೊದಲ ಬಾರಿಗೆ ಸ್ಕ್ರೀಪ್ಟ್ ಕೇಳಿದಾಗ ತುಂಬಾ ಚೆನ್ನಾಗಿ ಇತ್ತು. ಅಲ್ಲಿ ಏನೋ ಬೇಕಾಗಿತ್ತು ಎಂದು ಹೇಳುತ್ತಿದ್ದೆ. ಆದರೆ ಇಂಟ್ರೆಸ್ಟಿಂಗ್ ಇತ್ತು. ಈ ಚಿತ್ರದಲ್ಲಿ ಎಲ್ಲರಿಗೂ ಕೆಲಸವಿದೆ. ಡೈಲಾಗ್ ರೈಟರ್, ಕ್ಯಾಮೆರಾಮನ್ಗೂ ತುಂಬಾ ಕೆಲಸವಿದೆ. ಮ್ಯೂಸಿಕ್ ಡೈರೆಕ್ಟರ್ಗೂ ತುಂಬ ತುಂಬ ಕೆಲಸವಿದೆ. ಎಲ್ಲಾ ಆರ್ಟಿಸ್ಟ್ ಗೂ ಕೆಲಸವಿದೆ ಎಂದರು.
ಒಂದು ಸಿನಿಮಾವೆಂದರೆ ಟೆಕ್ನಿಕಲ್ ಅಂತಾರೆ ಇಲ್ಲ ಆಕ್ಟರ್ಸ್ ಸಿನಿಮಾ ಎಂದು ಕರೆಯುತ್ತಾರೆ. ಇದು ಎಲ್ಲರ ಸಿನಿಮಾ. ಕಲಾವಿದರು, ತಂತ್ರಜ್ಞನರ ಸಿನಿಮಾ. ಜನ ಕುತೂಹಲದಿಂದ ಸಿನಿಮಾ ನೋಡಬೇಕು. ನಾನು ನವೀನ್ ಜೊತೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೇನೆ. ಚಿತ್ರದಲ್ಲಿ ಇನ್ನೊಂದು ಸರ್ ಪ್ರೈಸ್ ಕ್ಯಾರೆಕ್ಟರ್ ಇದೆ. ಪ್ರತಿಯೊಂದು ಕೆಲಸದಲ್ಲಿ ದೇವರು ನಂಬುತ್ತೇವೆ. ಆದರೆ ಮನುಷ್ಯರೇ ದೇವರನ್ನು ನಂಬುತ್ತಾರೆ. ಇದು ಚಿತ್ರದ ಕಥೆಯ ಎಳೆ ಎಂದರು.
ನಿರ್ದೇಶಕ ಕಾರ್ತಿಕ್ ಅದ್ವೈತ್ ಮಾತನಾಡಿ, ನನಗೆ ಕನ್ನಡ ಮಾತನಾಡಲು ಬರುವುದಿಲ್ಲ. ಚಿತ್ರ ಬಿಡುಗಡೆಯಾಗುವಷ್ಟರಲ್ಲಿ ಕನ್ನಡ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಶಿವಣ್ಣ ಕಥೆ, ಕ್ಯಾರೆಕ್ಟರ್ ಮೇಲೆ ನಂಬಿಕೆ ಇಟ್ಟು ನನಗೆ ಸಿನಿಮಾ ನಿರ್ದೇಶನಕ್ಕೆ ಅವಕಾಶ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ. ನನ್ನ ಇಬ್ಬರು ನಿರ್ಮಾಪಕರು ಚಿತ್ರದ ಮುಖ್ಯ ಪಿಲ್ಲರ್ ಎಂದು ತಿಳಿಸಿದರು.
ಶಿವಣ್ಣನ 131ನೇ ಚಿತ್ರಕ್ಕೆ ಕಾರ್ತಿಕ್ ಅದ್ವೈತ್ ಹೇಳುತ್ತಿದ್ದಾರೆ. ತಮಿಳು ಚಿತ್ರವೊಂದನ್ನು ನಿರ್ಮಿಸಿರುವ ಅವರೀಗ ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ. ಶಿವಣ್ಣನ 131ನೇ ಚಿತ್ರ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಶಿವಣ್ಣ ಡಿಫ್ರೆಂಟ್ ಲುಕ್ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ.