ದರ್ಶನ್ ಚಿತ್ರ ಜೀವನದಲ್ಲಿ ಕರಿಯ ಸಿನಿಮಾ ಸಾಕಷ್ಟು ವಿಶೇಷವಾಗಿದೆ. ಮೆಜೆಸ್ಟಿಕ್ ಸಿನಿಮಾದ ಬಳಿಕ ತೆರೆಗೆ ಬಂದ ಈ ಚಿತ್ರವನ್ನು ನಿರ್ದೇಶಕ ಜೋಗಿ ಪ್ರೇಮ್ ಡೈರೆಕ್ಷನ್ ಮಾಡಿದ್ದರು. ಈ ಸಿನಿಮಾ ದರ್ಶನ್ ಸಿನಿ ಕೆರಿಯರ್ ಗೆ ದೊಡ್ಡ ಬ್ರೇಕ್ ನೀಡಿತ್ತು. ಇದೀಗ ಈ ಸಿನಿಮಾ ರಿರಿಲೀಸ್ ಆಗುತ್ತಿದೆ.
2003ರಲ್ಲಿ ತೆರೆಕಂಡ ಕರಿಯಾ ಸಿನಿಮಾವನ್ನು ಆನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ರು. ಈ ಸಿನಿಮಾ ಇದುವರೆಗೂ ಸುಮಾರು 15 ಸಲ ರೀ-ರಿಲೀಸ್ ಆಗಿದೆ. ಆದರೆ, ಈ ಸಿನಿಮಾ ಆದ್ಮೇಲೆ ಡೈರೆಕ್ಟರ್ ಪ್ರೇಮ್ ಮತ್ತು ದರ್ಶನ್ ಬೇರೆ ಯಾವುದೇ ಚಿತ್ರವನ್ನು ಮಾಡಿಲ್ಲ.
ಆದರೆ ದರ್ಶನ್ ಜೈಲಿಗೆ ಹೋಗುವ ಕೆಲವೇ ಕೆಲವು ದಿನಗಳ ಮೊದಲು ದರ್ಶನ್ ಮತ್ತು ಜೋಗಿ ಪ್ರೇಮ್ ಸಿನಿಮಾವೊಂದನ್ನ ಘೋಷಣೆ ಮಾಡಿದ್ದರು. ಆದರೆ ಆ ಬಳಿಕ ದರ್ಶನ್ ಜೈಲು ಸೇರಿದ್ದಾರೆ.
ದರ್ಶನ್ ಸಿನಿಮಾ ಜೀವನದಲ್ಲಿ ಕರಿಯ ಚಿತ್ರಕ್ಕೂ ಮಹತ್ವ ಇದೆ. ಗ್ಯಾಂಗ್ಸ್ಟರ್ ಒಬ್ಬನ ಕಥೆಯ ಚಿತ್ರ ಇದಾಗಿತ್ತು. ಈ ಸಿನಿಮಾದಲ್ಲಿ ದರ್ಶನ್ಗೆ ಅಭಿನಯಶ್ರೀ ಜೋಡಿ ಆಗಿದ್ದರು. 2003 ರಲ್ಲಿ ರಿಲೀಸ್ ಆದ ಈ ಚಿತ್ರಕ್ಕೆ ಪಾಸಿಟಿವ್ ರಿವ್ಯೂ ಬಂದಿದ್ದವು.
ಆದರೆ, ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಎ ಪ್ರಮಾಣ ಪತ್ರ ಕೊಟ್ಟಿತ್ತು. ಆದರೂ ಸಿನಿಮಾ 100 ದಿನ ಥಿಯೇಟರ್ನಲ್ಲಿ ಓಡಿತ್ತು. ಹೆಚ್ಚು ಕಡಿಮೆ 15 ಸಲ ಈ ಚಿತ್ರ ರೀ-ರಿಲೀಸ್ ಆಗಿದೆ. ಆದರೆ, ಇದೀಗ ಇದೇ ಚಿತ್ರ ಮತ್ತೊಮ್ಮೆ ರಿಲೀಸ್ ಆಗುತ್ತಿದೆ.
ಕರಿಯ ಚಿತ್ರಕ್ಕೆ ಹೊಸ ಸ್ಪರ್ಶ ನೀಡಿದ್ದು, 4K ಸೌಂಡ್ ಎಫೆಕ್ಟ್ ಕೂಡ ನೀಡಲಾಗಿದೆ. ಹೊಸ ಸ್ಪರ್ಶ, ಹೊಸ ಸೌಂಡ್ನೊಂದಿಗೆ ಈ ಚಿತ್ರ ರಿಲೀಸ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲೂ ಹೊಸ ಸ್ಪರ್ಶದ ಒಂದು ವಿಡಿಯೋ ಕೂಡ ರಿಲೀಸ್ ಅಗಿದೆ. ಈ ಮೂಲಕ ಸಿನಿಮಾ ಪ್ರೇಮಿಗಳಿಗೆ ಇದು ಹೊಸ ಅನುಭವ ನೀಡಲು ಮುಂದಾಗಿದೆ.