ಇತ್ತೀಚಿನ ದಿನಗಳಲ್ಲಿ ಇಂಟರ್ಮಿಟೆಂಟ್ ಫಾಸ್ಟಿಂಗ್ ಅಥವಾ ಮಧ್ಯಂತರ ಉಪವಾಸ ಬಹಳ ಪ್ರಚಲಿತದಲ್ಲಿದ್ದು ಸೆಲೆಬ್ರೆಟಿಗಳು ಕೂಡ ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗಿರಲು ಜೊತೆಗೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಈ ವಿಧಾನವನ್ನು ಅನುಸರಿಸುತ್ತಿದ್ದಾರೆ. ಹಾಗಾದರೆ ಮಧ್ಯಂತರ ಉಪವಾಸ ಮಾಡುವುದು ಹೇಗೆ?
ಉಪಯೋಗವೇನು?
ಪ್ರತಿದಿನ ಬೆಳಿಗ್ಗೆ ತಿಂಡಿಯನ್ನು 9 ಅಥವಾ 10 ಗಂಟೆಗೆ ಮಾಡಿದರೆ ಮಧ್ಯಾಹ್ನ ಸರಿಯಾದ ಸಮಯಕ್ಕೆ ಊಟ ಮಾಡಿ, ರಾತ್ರಿ ಊಟವನ್ನು ಸಾಯಂಕಾಲ 6 ಗಂಟೆಯೊಳಗೆ ಮುಗಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಗೆ ನೀರನ್ನು ಬಿಟ್ಟು ಏನನ್ನು ಸೇವಿಸಬೇಡಿ.
ಈ ರೀತಿ ಮಾಡುವುದರಿಂದ ನಿಮ್ಮ ದೇಹಕ್ಕೆ 15 ರಿಂದ16 ಗಂಟೆಗಳ ಗ್ಯಾಪ್ ಸಿಗುತ್ತದೆ. ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ವೈಜ್ಞಾನಿಕ ಪುರಾವೆಗಳ ಪ್ರಕಾರ ಈ ರೀತಿ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ. ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
ಅದಲ್ಲದೆ ಈ ಕ್ರಮವನ್ನು ರೂಢಿಸಿಕೊಳ್ಳುವುದರಿಂದ ದೇಹದಲ್ಲಿ ಊರಿಯೂತ ಕಡಿಮೆ ಆಗುತ್ತದೆ. ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ. ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಬರದಂತೆ ಇದು ತಡೆಗಟ್ಟುತ್ತದೆ ಎನ್ನಲಾಗಿದೆ.