ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದ ಏಜೆಂಟ್ ಒಬ್ಬರನ್ನು ವಜಾ ಮಾಡಿ ಆದೇಶಿಸಿದ್ದ ಕ್ರಮವನ್ನು ಬೆಂಗಳೂರಿನ ಹೈಕೋರ್ಟ್ ರದ್ದು ಪಡಿಸಿದೆ. ತಮ್ಮನ್ನು ಏಜೆಂಟ್ ಸ್ಥಾನದಿಂದ ರದ್ದು ಪಡಿಸಿದ್ದ ಕ್ರಮವನ್ನು ಪ್ರಶ್ನಿಸಿ ಸೂತ್ರಂ ಸುರೇಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಎಲ್ ಐಸಿ ನಿಬಂಧನೆಗಳ ಐದನೇ ಪರಿಚ್ಚೇಧದ ಪ್ರಕಾರ ಪ್ರಕ್ರಿಯೆ ಜೀವನಾಡಿಯಿದ್ದಂತೆ ಎಂದು ಹೇಳಿರುವ ನ್ಯಾಯಪೀಠ,
ಯಾವುದೇ ಸಿಬ್ಬಂದಿಯನ್ನು ವಜಾ ಆದೇಶ ಹೊರಡಿಸುವ ಮುನ್ನ ನಿರ್ದಿಷ್ಟ ನಿಯಮಾವಳಿ ಇದ್ದರೆ ಅದನ್ನು ಪಾಲನೆ ಮಾಡಬೇಕು. ಅದನ್ನು ಗಾಳಿಗೆ ತೂರಿ ಸಿಬ್ಬಂದಿಯನ್ನು ವಜಾ ಮಾಡುವುದು ಸರಿಯಾದ ಕ್ರಮವಲ್ಲ. ಅಲ್ಲದೇ, ಅರ್ಜಿದಾರರ ವಿಚಾರದಲ್ಲಿ ಕಡ್ಡಾಯ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿಲ್ಲ. ಕೊನೆ ಪಕ್ಷ ವಜಾ ಅದೇಶ ಮಾಡುವುದಕ್ಕೂ ಮುನ್ನ ಅವರ ಅಹವಾಲು ಸ್ವೀಕರಿಸಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.