ಬೆಂಗಳೂರು: ಬೆಂಗಳೂರಿನಲ್ಲಿ ಆಟೋ ರಿಕ್ಷಾ ಚಾಲಕರ ಪ್ರತಿಭಟನೆ ಹಿನ್ನೆಲೆ ಬಿಎಂಟಿಸಿ ಅಲರ್ಟ್ ಆಗಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೆಚ್ಚಿನ ಬಸ್ ಕಾರ್ಯಚರಣೆಗೆ ಬಿಎಂಟಿಸಿ ಮುಂದಾಗಿದೆ. ಈಗಾಗಲೇ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಸೇವೆ ನೀಡಲು ತಯಾರಿ ನಡೆಸಲಾಗಿದ್ದು ಅಗತ್ಯ ಭಾಗಗಳಿಗೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್, ಮಾರುಕಟ್ಟೆ, ಶಾಂತಿನಗರ, ಶಿವಾಜಿನಗರ, ಯಶವಂತಪುರ, ಸೇರಿ ಪ್ರಮುಖ ನಿಲ್ದಾಣಗಳಿಂದ ಹೆಚ್ಚಿನ ಕಾರ್ಯಚರಣೆಗೆ ಬಿಎಂಟಿಸಿ ಮುಂದಾಗಿದೆ.
ಮೀಟರ್ ಮೇಲೆ ಒಂದಿಷ್ಟು ಹಣ ಕೊಡಿ ಅಂತ ಕೇಳ್ತಿದ್ದ ಆಟೋ ಚಾಲಕರು ಇದೀಗ ಆಟೋ ಬಂದ್ಅನ್ನೇ ಬಂಡವಾಳ ಮಾಡಿಕೊಂಡು ಮನಸೋ ಇಚ್ಛೆ ಕೆಲ ಆಟೋ ಚಾಲಕರು ಹಣ ಕೇಳುತ್ತಿದ್ದಾರೆ. ಆಟೋ ಮುಷ್ಕರ ಹಿನ್ನೆಲೆ ಪ್ರಯಾಣಿಕರು ಮೆಟ್ರೋ, ಬಿಎಂಟಿಸಿ ಕಡೆಗೆ ಕಡೆ ಮುಖ ಮಾಡಿದ್ದಾರೆ. ನಮ್ಮ ಮೆಟ್ರೋ ಮುಖಾಂತರ ನಗರದ ಬೇರೆ ಬೇರೆ ಭಾಗಗಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇನ್ನೂ ಪ್ರತಿದಿನಕ್ಕೆ ಹೋಲಿಕೆ ಮಾಡಿದ್ರೆ ಮೆಟ್ರೋ ಪ್ರಯಾಣವನ್ನೇ ಸಾರ್ವಜನಿಕರು ಆಯ್ಕೆ ಮಾಡಿಕೊಂಡಿದ್ದಾರೆ.