ಬೆಂಗಳೂರು:– ಟ್ರಾಫಿಕ್ ಪೊಲೀಸರೇ ನೀವು ನೋಡಲೇಬೇಕಾದ ಸ್ಟೋರಿ. ನಗರದಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಟ್ರಾಫಿಕ್ ಪೊಲೀಸರು ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ತಪಾಸಣೆ ಯಾಕೆ ಮಾಡುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ.
ನಗರದಲ್ಲಿ ಯಾವುದೇ ಬಸ್, ಲಾರಿ, ಕ್ಯಾಬ್ ಆಟೋ ಹಾಗೂ ಬೈಕ್ಗಳಲ್ಲಿ ವಾಯುಮಾಲಿನ್ಯ ತಪಾಸಣಾ ಸರ್ಟಿಫಿಕೇಟ್ಗಳೇ ಇಲ್ಲ.
ಪೋಲಿಸರು, ಆರ್ಟಿಒ ಅಧಿಕಾರಿಗಳು ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲಾಂದರೆ, ಈ ಮೊದಲು 500 ರುಪಾಯಿ ದಂಡ ವಿಧಿಸುತ್ತಿದ್ದರು. ಆದರೆ ಈಗ ಇಬ್ಬರೂ ವಾಹನಗಳನ್ನು ತಪಾಸಣೆ ಮಾಡುತ್ತಿಲ್ಲ, ದಂಡವನ್ನು ವಿಧಿಸುತ್ತಿಲ್ಲ. ಹಾಗಾಗಿ ವಾಹನಗಳ ಮಾಲೀಕರು ಎಮಿಷನ್ ಟೆಸ್ಟ್ ಮಾಡಿಸಲು ಮುಂದಾಗುತ್ತಿಲ್ಲ. ಈ ಬಗ್ಗೆ ಪರಿಸರ ತಜ್ಞ ಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ.
ಪೋಲಿಸರು ಮತ್ತು ಟ್ರಾಫಿಕ್ ಪೋಲಿಸರು ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ತಪಾಸಣೆ ಮಾಡದಿರಲು ಕಾರಣ, ಪ್ರಮಾಣ ಪತ್ರ ಇಲ್ಲ ಎಂದಾದರೆ, ಆ ನಿಯಮ ಉಲ್ಲಂಘನೆಗೆ ಸ್ಥಳದಲ್ಲಿಯೇ ದಂಡ ವಿಧಿಸುವ ಅವಕಾಶ ಈಗಿಲ್ಲ. ನ್ಯಾಯಾಲಯದಲ್ಲಿ ದಂಡ ಪಾವತಿ ಮಾಡಬೇಕು. ಇದರಿಂದ ಆರ್ಟಿಓ ಮತ್ತು ಟ್ರಾಫಿಕ್ ಪೋಲಿಸರು ಎಮಿಷನ್ ಸರ್ಟಿಫಿಕೇಟ್ ಇಲ್ಲದ ವಾಹನಗಳಿಗೆ ತಪಾಸಣೆಯನ್ನು ಮಾಡುವುದಿಲ್ಲ ಮತ್ತು ದಂಡ ವಿಧಿಸುತ್ತಿಲ್ಲ. ಹೀಗಾಗಿ ನಗರದಲ್ಲಿ ವಿಪರೀತವಾಗಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ