ಹುಬ್ಬಳ್ಳಿ: ೪೧ ಕ್ಲಬ್ಗಳ ಸಂಘವು ತನ್ನ ದೀರ್ಘಾವಧಿಯ ಯೋಜನೆಯಾದ ಫ್ರೀಡಂ ಥ್ರೂ ಡಿಜಿಟಲ್ ಎಜುಕೇಶನ್ ಅಡಿಯಲ್ಲಿ ಆಗಸ್ಟ್ ೨೦೨೪ ರ ಅಂತ್ಯದ ಹೊತ್ತಿಗೆ ದೇಶದಾದ್ಯಂತ ೩೦೦ ಶಾಲೆಗಳನ್ನು ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಕೊಠಡಿಗಳೊಂದಿಗೆ ಸಜ್ಜುಗೊಳಿಸಲಿದೆ. ಇದು ೧.೫೦ ಲಕ್ಷ ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ `೧ ಈ ಸಂದರ್ಭದಲ್ಲಿ ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿದರು “ರಾಣೆಬೆನ್ನೂರಿನಲ್ಲಿ ೧೦೦ ಶಾಲೆಗಳನ್ನು ಸಜ್ಜುಗೊಳಿಸುವ ಮೂಲಕ, ಯಾವುದೇ ದೊಡ್ಡ ನಗರಕ್ಕೆ ಸಮಾನವಾಗಿ ದೂರದ ಊರುಗಳಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪೂರೈಸುವುದು ನನ್ನ ಗುರಿಯಾಗಿದೆ.
ನಮ್ಮಲ್ಲಿ ಒಬ್ಬರು ಅಥವಾ ಇಬ್ಬರು ಡಾ.ಕಲಾಮ್ಗಳು ಈ ಶಾಲೆಗಳಿಂದ ಬಂದರೂ, ನಮ್ಮ ಉದ್ದೇಶ ಈಡೇರುತ್ತದೆ. ಡಿಜಿಟಲ್ ಶಿಕ್ಷಣದ ಕ್ಷೇತ್ರದಲ್ಲಿ ೪೧ ಕ್ಲಬ್ಗಳ ಅಸೋಸಿಯೇಷನ್ನ ಕೆಲಸದಿಂದ ನನಗೆ ಸಂತೋಷವಾಗಿದೆ” ಎಂದರು
೪೧ ಕ್ಲಬ್ ಆಫ್ ಇಂಡಿಯಾದ ಅಧ್ಯಕ್ಷ ಅಸೋಸಿಯೇಶನ್ ೪೧ಎಆರ್ ಶ್ರೀನಿವಾಸ ಸರಸ್ವತುಲ ಮಾತನಾಡಿ, “ಫ್ರೀಡಂ ಥ್ರೂ ಡಿಜಿಟಲ್ ಎಜುಕೇಶನ್ ಎಂಬುದು ನಮ್ಮ ದೀರ್ಘಾವಧಿಯ ಯೋಜನೆಯಾಗಿದ್ದು, ಹಿಂದುಳಿದ ಹಿನ್ನೆಲೆ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮೆಟ್ರೋ ನಗರದ ವಿದ್ಯಾರ್ಥಿಗಳಂತೆ ಕಲಿಕಾ ಅವಕಾಶಗಳನ್ನು ಒದಗಿಸುವ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಶಿಕ್ಷಣ ಉಪಕರಣÀಗಳನ್ನು ಪೂರೈಸುತ್ತದೆ. ಮಕ್ಕಳು ಆತಂಕ ಅಥವಾ ಭಯವಿಲ್ಲದೆ ವೇಗವಾಗಿ ಮತ್ತು ಉತ್ತಮವಾಗಿ ಕಲಿಯಲು ಇದು ಸಹಾಯ ಮಾಡುತ್ತದೆ. ಈ ಯೋಜನೆಯು ಭರವಸೆ ಮತ್ತು ಅವಕಾಶಗಳ ನಡುವಿನ ಸೇತುವೆಯಾಗಿದೆ” ಎಂದು ಅವರು ಹೇಳಿದರು. ಹಾವೇರಿ ಜಿಲ್ಲೆಯ ೮೬ ಗ್ರಾಮಗಳು ಮತ್ತು ತಾಲೂಕು ಕೇಂದ್ರಗಳಲ್ಲಿ ಶಾಲೆಗಳು ಹರಡಿಕೊಂಡಿವೆ.
ರಾಣೆಬೆನ್ನೂರು ಜಿಲ್ಲೆಯಲ್ಲಿ ಬೀಜ ತಯಾರಿಕೆಯಲ್ಲಿ ವ್ಯವಹಾರ ಆಸಕ್ತಿ ಹೊಂದಿರುವ ಅಗ್ರಿ ಎಸಿಎಸ್ಇಎನ್ ಕಂಪನಿಯು ಈ ಯೋಜನೆಯಲ್ಲಿ ಪಾಲುದಾರಿಕೆ ಹೊಂದಿದೆ.
ಡಿಜಿಟಲ್ ಶಿಕ್ಷಣ ಮೂಲಕ ಸ್ವಾತಂತ್ರ್ಯ (ಎಫ್ಟಿಡಿಇ)
ನಮ್ಮ ದೀರ್ಘಾವಧಿಯ ಯೋಜನೆ ಫ್ರೀಡಮ್ ಥ್ರೂ ಡಿಜಿಟಲ್ ಎಜುಕೇಷನ್ (ಎಫ್ಟಿಡಿಇ). ಸಮಾಜದ ಹಿಂದುಳಿದ ವರ್ಗಗಳ ಮತ್ತು ಸ್ಥಳೀಯ ಮಾಧ್ಯಮದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿರುವ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿಗೆ ಡಿಜಿಟಲ್ ಶಿಕ್ಷಣ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಪರಿಕರಗಳನ್ನು ಪೂರೈಸುತ್ತದೆ. ಇದು ಡಿಜಿಟಲ್ ವ್ಯತ್ಯಾಸಕ್ಕೆ ಸೇತುವೆ ನಿರ್ಮಿಸುತ್ತದೆ ಅಲ್ಲದೇ ಶಿಕ್ಷಣದಲ್ಲಿನ ಭೌಗೋಳಿಕ ಮತ್ತು ಆರ್ಥಿಕ ಅನನುಕೂಲತೆಯನ್ನು ಅಳಿಸಿಹಾಕುತ್ತದೆ.
ನಾವು ಶೈಕ್ಷಣಿಕ ಸಾಫ್ಟ್ವೇರ್ ಅನ್ನು ಸ್ಟೇಟ್ ಬೋರ್ಡ್ ಅಥವಾ ಸಿಬಿಎಸ್ಇ ಪಠ್ಯಕ್ರಮದೊಂದಿಗೆ ೧ ರಿಂದ ೧೦ ನೇ ತರಗತಿಯವರೆಗಿನ ಇತರ ಸಹಪಠ್ಯ ಸಾಫ್ಟ್ವೇರ್ ಜೊತೆಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮತ್ತು ಮೋಜಿನದಾಗಿಸುವಂತೆ ಪೂರೈಸುತ್ತೇವೆ. ನಾವು ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ, ಕನ್ನಡ, ಮರಾಠಿ, ತೆಲುಗು, ಗುಜರಾತ್, ಬೆಂಗಾಲಿ, ಒರಿಯಾ, ಅಸ್ಸಾಮಿಗಳಲ್ಲಿ ಪಠ್ಯಕ್ರಮ ನೀಡುತ್ತೇವೆ.
ಡಿಜಿಟಲ್ ಸಾಫ್ಟ್ವೇರ್ ಬಳಸಲು ಶಿಕ್ಷಕರಿಗೆ ತರಬೇತಿ ನೀಡುತ್ತೇವೆ. ಸ್ಟ್ಯಾಂಡ್ ಮತ್ತು ಸ್ಕ್ರೀನ್, ಕೀಬೋರ್ಡ್ ಮತ್ತು ಮೌಸ್, ವೋಲ್ಟೇಜ್ ಸ್ಟೆಬಿಲೈಸರ್ ಜೊತೆಗೆ ಟಿವಿ ಅಥವಾ ಪ್ರೊಜೆಕ್ಟರ್ನಂತಹ ಅಗತ್ಯವಿರುವ ಹಾರ್ಡ್ವ್ಭೆರ್ಗಳನ್ನು ನಾವು ಒದಗಿಸುತ್ತೇವೆ. ಈ ವ್ಯವಸ್ಥೆಗೆ ದೈನಂದಿನ ಕಾರ್ಯಾಚರಣೆಗೆ ಇಂಟರ್ನೆಟ್ ಅಗತ್ಯವಿಲ್ಲ.
೨೦೨೪ರ ಆಗಸ್ಟ್ ಅಂತ್ಯದ ಹೊತ್ತಿಗೆ ನಾವು ಸುಮಾರು ೩೦೦ ಶಾಲೆಗಳನ್ನು ಪೂರ್ಣಗೊಳಿಸಲಿದ್ದೇವೆ. ಈ ಯೋಜನೆ ೧.೫೦ ಕೋಟಿ ರೂ.ಗಳ ಬಜೆಟ್ನಲ್ಲಿ ೧.೫೦ ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ ನೀಡಲಿದೆ. ದೀರ್ಘಾವಧಿಯ ಯೋಜನೆ ಭಾಗವಾಗಿ, ನಾವು ಈ ಕಾರ್ಯಕ್ರಮವನ್ನು ದೇಶಾದ್ಯಂತ ೧,೦೦೦ ಶಾಲೆಗಳಿಗೆ ಕೊಂಡೊಯ್ಯುವುದನ್ನು ಎದುರು ನೋಡುತ್ತಿದ್ದೇವೆ ಮುಂದಿನ ದಶಕದಲ್ಲಿ ೩ ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಇದು ಪರಿಣಾಮ ಬೀರಲಿದೆ.