ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ಜೈಲು ಸೇರಿದ್ದಾರೆ. ಪ್ರಕರದಲ್ಲಿ 17ಮಂದಿಯನನ್ನು ಬಂಧಿಸಿದ್ದು ಇವರುಗಳು ಜೈಲು ಸೇರಿ 75 ದಿನ ಕಳೆದಿದೆ. ಆದ್ರೆ ಇದುವರೆಗೂ ಯಾರೂ ಕೂಡ ಬಿಡುಗಡೆ ಬಯಸಿ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಖುದ್ದು ದರ್ಶನ್ ಕೂಡ ಬೇಲ್ಗಾಗಿ ಅರ್ಜಿ ನೀಡಿಲ್ಲ. ಈ ನಡುವೆ ಪ್ರಕರಣದ ಕೇಂದ್ರ ಬಿಂದು ಪವಿತ್ರಾಗೌಡ ಎಲ್ಲರಿಗಿಂತ ಮೊದಲು ಜೈಲಿನಿಂದ ಹೊರ ಬರಲು ರೆಡಿಯಾಗಿದ್ದು ಅದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ನಟ ದರ್ಶನ್ ಎಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅತ್ತ ದರ್ಶನ್ ಜೈಲುವಾಸಕ್ಕೆ ಒಗ್ಗಿಕೊಂಡ್ರೂ ಅಲ್ಲಿನ ಊಟ ಸೇರಲಾರದೇ ಮನೆ ಭೋಜನಕ್ಕೆ ಕೋರ್ಟ್ಗೆ ಮನವಿ ಮಾಡಿ ಮಾಡಿ ಕೊನೆಗೆ ಆ ಊಟಕ್ಕೂ ತಮ್ಮನ್ನು ಒಗ್ಗಿಕೊಂಡಿದ್ದಾರೆ. ದರ್ಶನ್ನಿಂದ ಹಿಡಿದು ಯಾವ ಆರೋಪಿಗೂ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಗುವ ಲಕ್ಷಣವಿಲ್ಲ. ಈ ನಡುವೆ ಪ್ರಕರಣದ ಕೇಂದ್ರ ಬಿಂದುವಾಗಿರುವ ನಟಿ ಹಾಗೂ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜೈಲಿನಿಂದ ಮುಕ್ತಿ ಬಯಸಿದ್ದಾರೆ.
ಹೊರಗಿದ್ದ ವೇಳೆ ಐಷಾರಾಮಿ ಜೀವನ ನಡೆಸುತ್ತಿದ್ದ ನಟಿ ಪವಿತ್ರಾ ಗೌಡಗೆ ಪರಪ್ಪನ ಅಗ್ರಹಾರ ಜೈಲು ನರಕವಾಗಿದೆ. ಅದಕ್ಕಾಗಿ ಆದಷ್ಟು ಬೇಗ ಜೈಲಿನಿಂದ ಹೊರ ಬರಲು ಹವಣಿಸುತ್ತಿದ್ದಾರೆ. ಎಲ್ಲ 17 ಆರೋಪಿಗಳ ಪೈಕಿ ಪವಿತ್ರಾ ಗೌಡ ಮೊದಲಿಗರಾಗಿ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಸರ್ಕಾರದ ಪರ ವಕೀಲರಿಗೆ ಕೋರ್ಟ್ ಸೂಚಿಸಿದೆ. ಆಗಸ್ಟ್ 22ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ.