ಅಮೆರಿಕದ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ತಮ್ಮ ಪ್ರತಿಸ್ಪರ್ಧಿ ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್ಗಿಂತ ಜನಪ್ರಿಯತೆಯಲ್ಲಿ 4 ಪಾಯಿಂಟ್ಗಳಿಂದ ಮುಂದಿದ್ದಾರೆ. ಆಂಗ್ಲಪತ್ರಿಕೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದ್ದು, ಅಧ್ಯಕ್ಷ ಜೋ ಬೈಡೆನ್ ಅಭ್ಯರ್ಥಿ ಆಗಿದ್ದಾಗ ಅವರಿಗೆ ಶೇ.39 ಮಂದಿ ಮಾತ್ರ ಬೆಂಬಲ ವ್ಯಕ್ತಪಡಿಸಿದ್ದರು.
ಹೊಸ ಸಮೀಕ್ಷೆಯಲ್ಲಿ ಕಮಲಾ ಹ್ಯಾರಿಸ್ ಅವರಿಗೆ ಶೇ.49, ಟ್ರಂಪ್ ಅವರಿಗೆ ಶೇ.45 ಬೆಂಬಲ ವ್ಯಕ್ತವಾಗಿದೆ. ಮತ್ತೂಂದು ಸಮೀಕ್ಷೆಯಲ್ಲೂ ಅಮೆರಿಕದ ಶೇ.48 ಮಂದಿ ಕಮಲಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಪರವಾಗಿ ಶೇ.41 ಮಂದಿ ಬೆಂಬಲ ಸೂಚಿಸಿದ್ದಾರೆ. ಬೈಡೆನ್ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಕಮಲಾ ಡೆಮಾ ಕ್ರಟಿಕ್ ಪಕ್ಷದ ಅಭ್ಯರ್ಥಿ ಆಗಿದ್ದಾರೆ.
ಕಮಲಾ ಮದ್ಯ ಸೇವಿಸಿ ಪ್ರಚಾರ?
ಡೆಮಾಕ್ರಾಟ್ ನಾಯಕಿ ಕಮಲಾ ಹ್ಯಾರಿಸ್ ಮೇರಿಲ್ಯಾಂಡ್ನಲ್ಲಿ ನಡೆದಿದ್ದ ಪ್ರಚಾರದಲ್ಲಿ ಮದ್ಯ ಸೇವಿಸಿ ಪ್ರಚಾರ ನಡೆಸಿದ್ದರೇ ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಹ್ಯಾರಿಸ್ ಭಾಷಣದ ವೇಳೆ ತೊದಲುತ್ತಿದ್ದಂತೆ ಭಾಸವಾಗುತ್ತಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ. ಆದರೆ ಸಾಕಷ್ಟು ಮಂದಿ ಈ ಹೇಳಿಕೆಗಳನ್ನು ಖಂಡಿಸಿದ್ದಾರೆ.