ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಳೆದ ಒಂದು ದಶಕದಲ್ಲಿ ಒಂದು ಮಹಾ ಬದಲಾವಣೆಯ ಪರ್ವವೇ ನಡೆದು ಹೋಗಿದೆ ಎನ್ನುವುದನ್ನು ಒಪ್ಪಲೇಬೇಕು ಯಾಕೆಂದರೆ ಇಂದು ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರ ವರೆಗೆ ಗೃಹಿಣಿಯರಿಂದ ಹಿಡಿದು ಉದ್ಯೋಗಸ್ಥನಿಗೂ, ಉದ್ಯಮಿಗೂ ಹೀಗೆ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಖಾತೆ ಎನ್ನುವುದು ಅನಿವಾರ್ಯ.
ಸರ್ಕಾರ ನೀಡುವ ಸ್ಕಾಲರ್ಶಿಪ್, ಸಹಾಯಧನಗಳು, ಪಿಂಚಣಿ ಪಡೆಯುವುದಕ್ಕೆ ಅಥವಾ ಬ್ಯಾಂಕ್ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಕಾರಣದಿಂದ ಅಥವಾ ವ್ಯಾಪಾರ ವ್ಯವಹಾರಗಳಲ್ಲಿ ಹಣಕಾಸಿನ ವಿನಿಮಯ ಸರಾಗವಾಗಲಿ ಎನ್ನುವ ಉದ್ದೇಶದಿಂದ ಅಥವಾ ಬ್ಯಾಂಕ್ ಗಳಿಂದ ಸಾಲ ಪಡೆಯುವುದಕ್ಕೆ ಹೀಗೆ ಒಂದಲ್ಲ ಒಂದು ಕಾರಣದಿಂದ ಪ್ರತಿಯೊಬ್ಬರು ಬ್ಯಾಂಕ್ ಖಾತೆಗಳನ್ನು ತೆರೆಯುತ್ತಾರೆ.
ಆದ್ರೆ ನಂತರವೂ ಆ ಖಾತೆಗಳನ್ನು ನಿರ್ವಹಿಸುವುದು ಸಹ ಅಷ್ಟೇ ಜವಾಬ್ದಾರಿಯನ್ನು ಕೆಲಸವಾಗಿದೆ ಯಾಕೆಂದ್ರೆ ಹೆಚ್ಚಿನ ಜನರು ತಮ್ಮಂಹ ಬ್ಯಾಂಕ್ ಗಳಲ್ಲಿ ಖಾತೆ ತೆರೆದು ಆ ಖಾತೆಯ ಮೂಲಕ ತಮ್ಮ ಕಾರ್ಯ ಮುಗಿದ ಮೇಲೆ ಅವುಗಳಿಗೆ ಹಣ ಹಾಕದೆ ಅವುಗಳನ್ನು ಸರಿಯಾಗಿ ನಿರ್ವಹಿಸದೇ ಹಾಗೆ ಬಿಡುತ್ತಾರೆ. ಇದರಿಂದಲೇ ಖಾತೆ ರದ್ದಾಗುವ ಹಾಗೂ ಬ್ಯಾಂಕ್ ರೂಲ್ ಗಳ ಪ್ರಕಾರವಾಗಿ ನಿಗದಿತವಾದ ಹಣವನ್ನು ಖಾತೆಯಲ್ಲಿ ಉಳಿಸದ ಕಾರಣ ದಂಡ ಕಡಿತ ವಾಗಿರುವ ಸಾಧ್ಯತೆಯನ್ನು ಇರುತ್ತದೆ.
ಮತ್ತೊಂದು ವಿಚಾರವೇನೆಂದರೆ, ಈಗ ಬ್ಯಾಂಕ್ ಖಾತೆಗಳಲ್ಲಿ ಹಣ ಹೂಡಿಕೆ ಮಾಡುವುದು ಅಥವಾ ಬ್ಯಾಂಕ್ ನಿಂದ ಸಾಲ ಪಡೆದುಕೊಳ್ಳುವುದಕ್ಕಾಗಿ ಖಾತೆ ತೆರೆಯುವುದು ಮಾತ್ರವಲ್ಲ ಇನ್ನು ಅನೇಕ ವಿಚಾರಗಳಿಗಾಗಿ ಒಂದು ಅಗತ್ಯ ದಾಖಲೆಯಾಗಿ ಬ್ಯಾಂಕ್ ಖಾತೆ ನಮ್ಮ ಜೊತೆ ಇರುತ್ತದೆ.
ನಾವು ಯಾವುದೋ ವೆಹಿಕಲ್ ಲೋನ್ ಇಲ್ಲವೇ ಗೃಹ ಸಾಲ ಅಥವಾ ಇನ್ಯಾವುದೇ ಸಾಲವನ್ನು ಮಾಡಿದ್ದರೆ ಮತ್ತು ಪ್ರತಿ ತಿಂಗಳು EMI ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುವಂತೆ ಒಪ್ಪಂದ ಮಾಡಿಕೊಂಡಿದ್ದರೆ ನಮ್ಮ ಬ್ಯಾಂಕ್ ಖಾತೆಗಳಲ್ಲಿ ಆ ತಿಂಗಳಿನ EMI ಹಣ ಆಟೋ ಡಿಡೆಕ್ಟ್ ಆಗಲು ಬೇಕಾದಷ್ಟು ಹಣವನ್ನು ಉಳಿಸಿಕೊಂಡಿರಲೇಬೇಕು ಖಾತೆಯಲ್ಲಿ ಹಣ ಇಲ್ಲದಿದ್ದರೆ ಇಂಥ ಪ್ರಕರಣಗಳಾದ ಸಂದರ್ಭದಲ್ಲಿ ಸಿಬಿಲ್ ಸ್ಕೋರ್ ಸಹ ಕುಸಿಯುತ್ತದೆ ಹಾಗೂ ಇದರೊಂದಿಗೆ ಇನ್ನಷ್ಟು ದಂಡವನ್ನು ಹೆಚ್ಚಾಗಬಹುದಾದ ಸಾಧ್ಯತೆಯೂ ಸಹ ಇರುತ್ತದೆ.
ಹಾಗಾಗಿಯೇ ಪ್ರಧಾನಮಂತ್ರಿ ಜನ ಧನ್ ಖಾತೆ ಅಂದರೆ ಜೀರೋ ಬ್ಯಾಲೆನ್ಸ್ ಅಕೌಂಟ್ ಹೊರತುಪಡಿಸಿ ಇನ್ಯಾವುದೇ ರೀತಿಯ ಬ್ಯಾಂಕ್ ಖಾತೆಗಳನ್ನು ನೀವು ಹೊಂದಿದ್ದರೆ ನಿಮ್ಮ ಬ್ಯಾಂಕ್ ನಿಯಮದ ಪ್ರಕಾರವಾಗಿ ಮಿನಿಮಮ್ ಬ್ಯಾಲೆನ್ಸ್ ಎಷ್ಟು ಎಂದು ತಿಳಿದುಕೊಂಡು ಮತ್ತು ನಿಮ್ಮ ಮಾಸಿಕ ಅಥವಾ ವಾರ್ಷಿಕವಾಗಿ ವಹಿವಾಟು ಹೇಗಿದೆ ಎನ್ನುವುದರ ಅನುಸಾರವಾಗಿ.