ನಾವು ದಿನ ನಿತ್ಯ ಮನೆಯಲ್ಲಿ ತಯಾರು ಮಾಡುವ ಅನೇಕ ಬಗೆಯ ಆಹಾರ ಪದಾರ್ಥಗಳು ಶುಂಠಿ -ಬೆಳ್ಳುಳ್ಳಿ ಪೇಸ್ಟ್ ಬಳಕೆ ಮಾಡುವುದರಿಂದ ಬಹಳಷ್ಟು ರುಚಿ ಕೊಡುತ್ತವೆ. ಜೀರ್ಣ ಶಕ್ತಿ ದುರ್ಬಲವಾಗಿರುವವರಿಗೆ ಶುಂಠಿ – ಬೆಳ್ಳುಳ್ಳಿ ಪೇಸ್ಟ್ ಬಳಕೆ ಮಾಡಿದ ಆಹಾರ ಸೇವನೆ ಮಾಡುವುದರಿಂದ ಅಜೀರ್ಣತೆ ಮತ್ತು ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ಇಲ್ಲವಾಗುತ್ತದೆ.
ಔಷಧೀಯ ತಯಾರಿಕೆ ಹಾಗೂ ಅಡುಗೆಯ ರುಚಿಯನ್ನು ಹೆಚ್ಚಿಸುವ ಈ ಎರಡು ಪದಾರ್ಥಗಳು ಎಲ್ಲರ ಅಡುಗೆ ಮನೆಯಲ್ಲಿಯೂ ಇದ್ದೆ ಇರುತ್ತದೆ. ಅದಲ್ಲದೇ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಹೆಚ್ಚು ಉಪಯೋಗಿಸುವವರೇ ಹೆಚ್ಚು.ಆದರೆ ಕೆಲವರು ಫ್ರೆಶ್ ಆಗಿರಲೆಂದು ಮನೆಯಲ್ಲಿ ಈ ಮಿಶ್ರಣವನ್ನು ತಯಾರಿಸುತ್ತಾರೆ. ಯಾವುದೇ ಕಲಬೆರಕೆಯಿಲ್ಲದೇ ಸುಲಭವಾಗಿ ಈ ಪೇಸ್ಟನ್ನು ಮನೆಯಲ್ಲಿ ಮಾಡಿಕೊಳ್ಳುವುದು ಕಷ್ಟವೇನಲ್ಲ.
- ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಸುವಾಗ ಶುಂಠಿಯನ್ನು ಸಿಪ್ಪೆ ಸುಲಿಯಬೇಕು. ಇಲ್ಲದಿದ್ದರೆ ಅದರ ಸಿಪ್ಪೆಯಿಂದಾಗಿ ಪೇಸ್ಟ್ ಬೇಗನೆ ಹಾಳಾಗುತ್ತದೆ. ಅದಲ್ಲದೇ ಈ ಮಿಶ್ರಣವು ಕಹಿಯಾಗಿರುತ್ತದೆ.
- ಶುಂಠಿ ಬೆಳ್ಳುಳ್ಳಿ ಜೊತೆಗೆ ಒಂದು ಚಮಚ ಎಣ್ಣೆ, ಒಂದು ಚಮಚ ವಿನೆಗರ್, ಅರ್ಧ ಚರ್ಮದಷ್ಟು ಉಪ್ಪು ಸೇರಿಸಿದರೆ ರುಚಿ ಹೆಚ್ಚಾಗುತ್ತದೆ.
- ಈ ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಸಿದ ಸಂಗ್ರಹಿಸಿಡುವಾಗ ಸ್ವಚ್ಛವಾದ ಗಾಳಿಯಾಡದ ಪಾತ್ರೆಯಲ್ಲಿ ತುಂಬಿಸಿ ರೆಫ್ರಿಜರೇಟರ್ನಲ್ಲಿ ಇಟ್ಟರೆ ಈ ಪೇಸ್ಟ್ ಹಾಳಾಗುವುದಿಲ್ಲ.
- ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಳಾಗದೆ ಉಳಿಯಲು ಉತ್ತಮ ಮಾರ್ಗವೆಂದರೆ ಅದಕ್ಕೆ ಉಪ್ಪು ಅಥವಾ ಎಣ್ಣೆಯಂತಹ ನೈಸರ್ಗಿಕ ಸಂರಕ್ಷಕವನ್ನು ಸೇರಿಸುವುದು. ಈ ರೀತಿ ಮಾಡಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ರೆಫ್ರಿಜರೇಟ್ ಮಾಡಲು ಅಥವಾ ಫ್ರೀಜ್ ಮಾಡಲು ಹೊರಟರೂ, ಇದು ಕನಿಷ್ಠ ಒಂದೆರಡು ವಾರಗಳವರೆಗೆ ಇರುತ್ತದೆ.
- ಶುಂಠಿ ಬೆಳ್ಳುಳ್ಳಿ ಪೇಸ್ಟ್ನ್ನು ತಯಾರಿಸುವಾಗ ಯಾವಾಗಲೂ ನೀರನ್ನು ಸೇರಿಸುವುದನ್ನು ತಪ್ಪಿಸಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ಗೆ ನೀರನ್ನು ಸೇರಿಸುವುದರಿಂದ ಅದು ಬೇಗನೇ ಹಾಳಾಗುತ್ತದೆ. ಬದಲಿಗೆ ನೀರನ್ನು ಬಳಸದೇ ಇರುವುದರಿಂದ ಈ ಪೇಸ್ಟ್ ಹೆಚ್ಚು ಕಾಲ ಹಾಳಾಗದೆ ಉಳಿಯುತ್ತದೆ.
- ನೀವು ತಯಾರಿಸಿರುವ ಪೇಸ್ಟ್ಗೆ ಹೊಂದಿಕೆಯಾಗುವಷ್ಟೇ ದೊಡ್ಡದಾದ ಕಂಟೇನರ್ನ್ನು ಆಯ್ಕೆ ಮಾಡಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಹಾಳಾಗುವ ಸಾಧ್ಯತೆ ಕಡಿಮೆ.