ಬೆಂಗಳೂರು :- ಪೊಲೀಸ್ ಆಯುಕ್ತರು ನೋಡಲೇ ಬೇಕಾದ ಎಕ್ಸ್ ಕ್ಲೂಸಿವ್ ಸ್ಟೋರಿ ಇದು. ಒಂದೆಡೆ ಬೆಂಗಳೂರು ಪೊಲೀಸ್ರು ಮಾದಕ ವಸ್ತುಗಳ ವಿರುದ್ಧ ಸಮರಸರಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿರುವ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ.
ಬೆಂಗಳೂರು ಸ್ಮಶಾನದಲ್ಲಿ ವ್ಯಸನಿಗಳು ಗಾಂಜ ಕೃಷಿ ಮಾಡ್ತಿದ್ದಾರ ಎಂಬ ಪ್ರಶ್ನೆ ಉದ್ಭವಿಸಿದೆ. ಇದು ಸಿಲಿಕಾನ್ ಸಿಟಿಯ ರುದ್ರಭೂಮಿ ಯಲ್ಲಿ ಗಾಂಜಾ ಗಿಡ ಬೆಳೆದ ಕತೆ ಆಗಿದ್ದು, ನಗರದ ಯಾವುದೇ ಏರಿಯಾಗೆ ಹೋದ್ರು, ಗಾಜ ಘಾಟು ಬರುತ್ತೆ. ಪೊಲಿಸ್ರು ಸರ್ಕಾರ ಗಾಂಜ ನಿರ್ಮೂಲನೆಗೆ ಸಾಕಷ್ಟು ಪಣ ತೊಟ್ಟರೂ ಈ ಗಾಂಜ ಘಾಟು ಮಾತ್ರ ಕಡಿಮೆ ಆಗ್ತಿಲ್ಲ.
ಮೊನ್ನೆ ಮೊನ್ನೆ ರಿಲೀಸ್ ಆದ ಭೀಮಾ ಸಿನಿಮಾದಲ್ಲೂ ಕೂಡ ಸಿಲಿಕಾನ್ ಸಿಟಿಯ ಗಾಂಜ ಹಾಗೂ ಡ್ರಗ್ ಬಗ್ಗೆ ಮೆಸೇಜ್ ಕೊಡಲಾಗಿದೆ. ಆದರೂ ಸಿಲಿಕಾನ್ ಸಿಟಿಯಲ್ಲಿ ಮಾತ್ರ ವ್ಯಸನಿಗಳು ತಮ್ಮ ಛಾಳಿ ಬಿಟ್ಟಿಲ್ಲ.
ಪೆಡ್ಲರ್ ಗಳಿಂದ ಬರೋ ಗಾಂಜವನ್ನ ವ್ಯಸನಿಗೆಳಿಗೆ ತಲುಪಿಸೋದು ಒಂದು ಸವಾಲಿನ ಕೆಲಸ. ಇದೇ ಕಾರಣಕ್ಕೆ ಕೆಲವೊಂದಷ್ಟು ಜನ ಗಾಂಜ ಕೃಷಿಗೆ ಮುಂದಾಗಿದ್ದಾರ ಅನ್ನೋ ಅನುಮಾನ ಮೂಡಿದೆ. ಯಲಹಂಕ ಬಳಿಯ ಅಟ್ಟೂರು ಸ್ಮಶಾನದಲ್ಲಿ ಗಾಂಜ ಕೃಷಿ ನಡೆದಿದ್ಯಾ ಅನ್ನೋ ಅನುಮಾನ ಮೂಡಿದ್ದು, ಅಲ್ಲಿನ ಗಾಂಜ ಗಿಡಗಳನ್ನ ಮೋಡಿದ್ರೆ ಇದು ಗೊತ್ತಾಗುತ್ತೆ.
ಈ ರುದ್ರಭೂಮಿ ಗಾಂಜವ್ಯಸನಿಗಳ ಅಡ್ಡೆಯಾಗಿದೆ ಅನ್ನೋಸಕ್ಕೆ ಇಲ್ಲಿನ ಗಾಂಜ ಗಿಡಗಳೇ ಸಾಕ್ಷಿಯಾಗಿದೆ. ಸ್ಮಶಾನದ ಎರಡು ರೌಂಡ್ ಹಾಕಿದ್ರೆ ಹತ್ತಾರು ಗಾಂಜ ಗಿಡಗಳ ಘಾಟು ಮೂಗಿ ರಾಚುತ್ತೆ. ಇನ್ನೂ ಸ್ಮಶಾನದ ಮೂಲೆ ಮೂಲೆ ಪರೀಕ್ಷೆ ಮಾಡಿದ್ರೆ ಅದೆಷ್ಟು ಗಾಂಜ ಗಿಡಗಳು ಕಾಣುತ್ತೋ ಗೊತ್ತಿಲ್ಲ.
ಇನ್ನೂ ಸ್ಮಶಾನದಲ್ಲಿ ಗಾಂಜ ಸೇದೋವಾಗ ಉದುರಿರೋ ಬೀಜದಿಂದ ಗಿಡ ಬೆಳದಿದ್ಯೋ, ಇಲ್ಲ ಸ್ಮಶಾನ ಯಾರೂ ಬರೋಲ್ಲ ಅಂತ ಬೇಕೆಂದೆ ಗಾಂಜ ಕೃಷಿ ಮಾಡಿದ್ದಾರೊ ಗೊತ್ತಿಲ್ಲ. ಇನ್ನಾದ್ರೂ ಪೊಲೀಸ್ರು ಈ ಗಾಂಜ ಕೃಷಿಗೆ ಮುಕ್ತಿ ನೀಡಿ ಗಾಂಜ ಕೃಷಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸ್ತಾರ ಕಾದು ನೋಡ್ಬೇಕಾಗಿದೆ.