ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಗ್ರಹಚಾರ ಕೆಟ್ಟಂಗಿದೆ. ಒಂದರ ಹಿಂದೊದರಂತೆ ದರ್ಶನ್ ಗೆ ಸಂಕಷ್ಟ ಎದುರಾಗುತ್ತಲೆ ಇದೆ. ಸದ್ಯಕ್ಕಂತು ದರ್ಶನ್ ಜೈಲಿನಿಂದ ಹೊರ ಬರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಹೇಗಾದರು ಮಾಡಿ ಪತಿಯನ್ನು ಹೊರತರಬೇಕೆಂದು ದರ್ಶನ್ ಪತ್ನಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಸಾಕಷ್ಟು ದೇವಸ್ಥಾನಗಳಿಗೆ ಸುತ್ತಿ ಮನವಿ ಮಾಡುತ್ತಿದ್ದಾರೆ. ಸಂಬಂಧಿಕರು ಸಹ ಇಲ್ಲಸಲ್ಲದ ದೇವರಿಗೆ ಹರಕೆ ಕಟ್ಕೊಂಡ್ರು. ಆದರೆ, ಒಂದೇ ಒಂದು ತುತ್ತು ಮನೆಯೂಟವೂ ಸಿಗ್ತಿಲ್ಲ. ಮನೆ ಊಟದ ಭಾಗ್ಯ ಸಿಗುತ್ತಾ ಅಂತಾ ಕಾಯ್ತಿದ್ದ ದರ್ಶನ್ಗೆ ಜೈಲೂಟವೇ ಗತಿಯಾಗಿದೆ. ಈ ಮಧ್ಯೆ ದರ್ಶನ್ ಪರ ವಾದ ಮಾಡಲು ಖ್ಯಾತ ವಕೀಲರೆ ಹಿಂದೇಟು ಹಾಕಿದ್ದಾರೆ.
ದರ್ಶನ್ ಪರ ವಾದ ಮಂಡಿಸೋದಕ್ಕೆ ಹಿರಿಯ ವಕೀಲರೇ ಸಿಗ್ತಿಲ್ಲವಂತೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಿರಿಯ ವಕೀಲ ಸಿ.ವಿ ನಾಗೇಶ್ ಮೊರೆ ಹೋಗಿದ್ದರು. ಆದರೆ, ನಾಗೇಶ್ ಅವರು ದರ್ಶನ್ ಕೇಸ್ನಲ್ಲಿ ಸೈಲೆಂಟ್ ಆಗಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ವಿರುದ್ಧ ಸಿಕ್ಕಿರುವ ಸಾಕ್ಷ್ಯಗಳೇ ತಾಂತ್ರಿಕ ಹಾಗೂ ಮೆಡಿಕಲ್ ಸಾಕ್ಷ್ಯಗಳು ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿದ್ದು ಇದೇ ಕಾರಣಕ್ಕೆ ದರ್ಶನ್ ಪರ ವಾದ ಮಾಡಲು ಲಾಯರ್ ಗಳು ಹಿಂದೇಟು ಹಾಕ್ತಿದ್ದಾರಂತೆ.
ರೇಣುಕಾಸ್ವಾಮಿ ಕೊಲೆ ಕೇಸ್ ನ ಪ್ರತಿ ಸಾಕ್ಷ್ಯದಲ್ಲೂ ದರ್ಶನ್ ಪಾತ್ರ ಇರೋದು ಬಹುತೇಕ ಖಾಯಂ ಆಗಿದೆ. ಹೀಗಾಗಿ ದರ್ಶನ್ ಕೇಸ್ ಕೈಗೆತ್ತಿಕೊಂಡರೆ ಹಿನ್ನೆಡೆ ಅನುಭವಿಸುವ ಆತಂಕ ಕಾಡ್ತಿದೆ. ಹೀಗಾಗಿಯೇ ವಕೀಲರು ಹಿಂದೇಟು ಹಾಕ್ತಿದ್ದಾರೆ. ಇದು ದರ್ಶನ್ಗೆ ಆರಂಭದಲ್ಲೇ ಬಿಗ್ ಶಾಕ್ ನೀಡಿದೆ.