ಬೆಂಗಳೂರು: ಕೊಟ್ಟ ಸಾಲ ವಾಪಸ್ ಕೇಳಿ ಪ್ರಿಯತಮೆಗೆ ಟಾರ್ಚರ್ ಕೊಡುತ್ತಿದ್ದ ಆಕೆಯ ಸ್ನೇಹಿತೆಗೆ ಚಾಕುವಿನಿಂದ ಇರಿದು ಪಾಗಲ್ ಪ್ರೇಮಿ ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾಗಡಿ ರಸ್ತೆಯ ತಾವರೆಕೆರೆ ಠಾಣಾ ವ್ಯಾಪ್ತಿಯ ಚನ್ನೇನಹಳ್ಳಿಯಲ್ಲಿ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ರಕ್ಷಿತಾ, ಕಾರ್ತಿಕ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರಿಗೆ ಜಗಳವಾಗಿತ್ತು. ಇದೇ ವೇಳೆ ರಕ್ಷಿತಾಗೆ ಚನ್ನೇನಹಳ್ಳಿಯ ಮಂಜುಳಾ ಹಣ ಸಹಾಯ ಮಾಡಿದ್ದರು. ಆದರೆ ಕೊಟ್ಟ ಸಾಲ ವಾಪಸ್ ಕೊಡದ ಹಿನ್ನೆಲೆ,
ಸಾಲದ ಹಣ ತೀರಿಸೋವರೆಗೂ ಟೈಲರಿಂಗ್ ಕೆಲಸ ಮಾಡಿ ಸಾಲ ತೀರಿಸುವಂತೆ ಮಂಜುಳಾ ರಕ್ಷಿತಾಗೆ ಹಿಂಸೆ ಕೊಟ್ಟಿದ್ದಾರೆ. ಈ ವಿಚಾರವನ್ನ ಫೋನ್ ಮಾಡಿ ಲವರ್ ಬಾಯ್ ಕಾರ್ತಿಕನಿಗೆ ರಕ್ಷಿತಾ ತಿಳಿಸಿದ್ದಾಳೆ. ಕೋಪಗೊಂಡ ಕಾರ್ತಿಕ್, ಸೀದಾ ಚನ್ನೇನಹಳ್ಳಿಯ ಮಂಜುಳಾ ಮನೆಗೆ ಬಂದಿದ್ದಾನೆ. ಈ ವೇಳೆ ಮಂಜುಳ ಡೋರ್ ಓಪನ್ ಮಾಡ್ತಿದ್ದಂತೆ ಚಾಕುವಿನಿಂದ ಕುತ್ತಿಗೆಗೆ ಇರಿದು ರಕ್ಷಿತಾ ಜೊತೆ ಕಾರ್ತಿಕ್ ಎಸ್ಕೇಪ್ ಆಗಿದ್ದಾನೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಮಂಜುಳಾ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಆರೋಪಿ ಕಾರ್ತಿಕ್ ನನ್ನು ತಾವರೆಕೆರೆ ಪೊಲೀಸರು ಅರೆಸ್ಟ್ ಮಾಡಿ, ವಿಚಾರಣೆ ಕೈಗೊಂಡಿದ್ದಾರೆ.