ಅಡುಗೆ ಮನೆಯಲ್ಲಿ ಹೆಚ್ಚು ಜಿರಳೆಗಳು ಓಡಾಡುತ್ತಿದ್ದರೆ, ಕಿತ್ತಳೆ ಸಿಪ್ಪೆಯನ್ನು ಬಳಸಿ. ಏಕೆಂದರೆ ಇದರಲ್ಲಿ ಲಿಮೋನೆನ್ ಎಂಬ ಸಂಯುಕ್ತ ಇರುತ್ತದೆ. ಈ ಸಂಯುಕ್ತದಿಂದ ಜಿರಳೆಗಳನ್ನು ನೈಸರ್ಗಿಕವಾಗಿ ತೊಡೆದುಹಾಕಬಹುದು
ಮೊದಲು ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ. ಇದನ್ನು ಬಿಸಿಲಿನಲ್ಲಿ ಒಣಗಿಸಬಹುದು ಅಥವಾ ಮೈಕ್ರೊವೇವ್ ಒಲೆಯಲ್ಲಿ ಬಿಸಿ ಮಾಡಬಹುದು. ಅದು ಚೆನ್ನಾಗಿ ಒಣಗಿದ ನಂತರ, ಜಿರಳೆಗಳು ವಾಸಿಸುವ ಸ್ಥಳದಲ್ಲಿ ಇರಿಸಿ, ಜಿರಳೆಗಳು ಅದರ ವಾಸನೆಯನ್ನು ಸಹಿಸುವುದಿಲ್ಲ. ಹಾಗಾಗಿ ಅವುಗಳಿಂದ ದೂರ ಉಳಿಯುತ್ತವೆ.
ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಜಿರಳೆಗಳು ಯಾವಾಗಲೂ ಇರುತ್ತವೆ. ಅದನ್ನು ತೊಡೆದುಹಾಕಲು ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಿರುತ್ತೇವೆ. ಇನ್ನು ಕಿಚನ್ʼನಲ್ಲಿ ರಾಸಾಯನಿಕ ಸ್ಪ್ರೇಗಳನ್ನು ಬಳಕೆ ಮಾಡುವುದು ಸಹ ಅಪಾಯಕಾರಿ ಎನ್ನಲಾಗಿದೆ.