ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ರವರ ಮಗನ ಜೀವಕ್ಕೆ ಆಪತ್ತಿರುವ ಸುದ್ದಿ ಭದ್ರಾವತಿಯಲ್ಲಿ ವಾರದಿಂದಲೂ ಹರಿದಾಡುತ್ತಿತ್ತು. ಸಂಗಮೇಶ್ರವರ ಮಗ ಬಸವರನ್ನ ಕೊಲೆ ಮಾಡಲು ಸ್ಕೆಚ್ ರೂಪಿಸಲಾಗಿದೆ ಎಂಬ ಸುದ್ದಿ ಭದ್ರಾವತಿಯಲ್ಲಿ ಆತಂಕವೂ ಮೂಡಿಸಿತ್ತು.
ಈ ಪ್ರಕರಣ ಇದೀಗ ತಾರ್ಕಿಕ ಹಂತ ತಲುಪಿದೆ.
ಎಲ್ಲಾ ರೀತಿಯಲ್ಲಿ ಪ್ರಕರಣವನ್ನು ಮುಚ್ಚಿಡುವ ಪ್ರಯತ್ನ ನಡೆದಿತ್ತಾದರೂ, ಇದೀಗ ಅಂತಿಮವಾಗಿ ಪ್ರಕರಣ ದಾಖಲೆ ರೂಪದಲ್ಲಿ ಬೆಳಕಿಗೆ ಬಂದಿದೆ.ಈ ಸಂಬಂಧ ಪೊಲೀಸರು 19 ನೇ ತಾರೀಖು ಎಫ್ಐಆರ್ ದಾಖಲಿಸಿದ್ದು, ಅದರಲ್ಲಿ ಜೈಲಿನಿಂದಲೇ ಡಿಚ್ಚಿ ಮುಬಾರಕ್, ಭದ್ರಾವತಿಯ ಟಿಪ್ಪು ಆಂಡ್ ಟೀಂನೊಂದಿಗೆ ಸೇರಿಕೊಂಡು ಬಸವನ ವಿರುದ್ಧ ಕೊಲೆ ಸ್ಕೆಚ್ ರೂಪಿಸಿದ್ದರ ಬಗ್ಗೆ ಆರೋಪ ಮಾಡಲಾಗಿದೆ.
FIR ನಲ್ಲಿ ಏನಿದೆ
ಈ ಸಂಬಂಧ ಶಾಸಕರ ಆಪ್ತರೊಬ್ಬರು ನೀಡಿರುವ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ. ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಸ್ಟೇಷನ್ನಲ್ಲಿ ಈ ಸಂಬಂಧ ದಾಖಲಾಗಿರುವ ದೂರಿನ ಅನ್ವಯ 2. Act & Section: , 2023 (U/s-111(3),189(3),189(4).61(2)(a), 191(3), 190) ಅಡಿಯಲ್ಲಿ ಎಫಐಆರ್ ದರ್ಜ್ ಆಗಿದೆ.
ಭದ್ರಾವತಿ ನಗರದ ಜಟ್ ಪಟ್ ನಗರದ ವಾಸಿಯಾದ ಮುಬಾರಕ್ ಮುಬ್ಬು ಕಳೇದ 17 ನೇ ತಾರೀಖು ಒಬ್ಬ ವ್ಯಕ್ತಿಯ ಬಳಿ ಬಂದು ಬಸಣ್ಯ ಎಲ್ಲಿದ್ದಾರೆ ಎಂದು ಕೇಳಿದ್ದಾನೆ. ಆ ಬಳಿಕ ಆತ ಡಿಚ್ಚಿ ಮುಬಾರಕ್ ಜೈಲಿನಿಂದ ಎರಡು ಪ್ರತ್ಯೇಕ ಫೋನ್ ನಂಬರ್ನಿಂದ ಕರೆ ಮಾಡಿ, ಬಸವರನ್ನ ಮುಗಿಸುವ ಡೀಲ್ ನಡೆದಿರುವ ಬಗ್ಗೆ ಹೇಳಿದ್ದಾನೆ.ಇದನ್ನ ಕೇಳಿಸಿಕೊಂಡ ವ್ಯಕ್ತಿಯು ಪೊಲೀಸರಿಗೆ ದೂರು ನೀಡಿದ್ದಾರೆ.
ಮುಬ್ಬು ಹೇಳಿದಂತೆ ಜೈಲಿನಿಂದಲೇ ಡಿಚ್ಚಿ ಮುಬಾರಕ್ ಬಸವನ ಹತ್ಯೆಗೆ ಸ್ಕೆಚ್ ಹಾಕಿ ಸೀಗೆಬಾಗಿ ನಿವಾಸಿ ಟಿಪ್ಪುಗೆ ಡೀಲ್ ಕೊಟ್ಟಿದ್ದಾನೆ. ಗಾಂದಿ ಸರ್ಕಲ್ನಲ್ಲಿ ಬಸವನನ್ನ ಹೊಡೆದು ಹಾಕಿ ಎಂದು ಟಿಪ್ಪು ಆಂಡ್ ಟೀಂಗೆ ಹೇಳಿದ್ದ ಎಂದು ಮುಬ್ಬು ತಿಳಿಸಿದ್ದಾಗಿ ದೂರುದಾರರು ಹೇಳಿದ ಪ್ರಕಾರ ಎಫ್ಐಆರ್ ದಾಖಲಾಗಿದೆ.
ಇಷ್ಟೆ ಅಲ್ಲದೆ ಕಳೇದ 17 ತಾರೀಖು ರಂಗಪ್ಪ ಸರ್ಕಲ್ ಬಳಿ ಸಿಕ್ಕ ಟಿಪ್ಪು ಬಾರ್ವೊಂದರಲ್ಲಿ ಕುಳಿತು ಡಿಚ್ಚಿ ಮುಬಾರಕ್ ಡೀಲ್ ಕೊಟ್ಟಿದ್ದು, ಅದರಂತೆ ಚಾಕು ತಂದಿದ್ದೇನೆ ಎಂದು ಮುಬ್ಬುಗೆ ತೋರಿಸಿರುವ ಬಗ್ಗೆ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಾರೆ ಕೊಲೆಗೆ ಸ್ಕೆಚ್, ಅಕ್ರಮ ಕೂಟು, ಸಂಚು ರೂಪಿಸಿದ ಆರೋಪ ಸೇರಿದಂತೆ ಬಿಎನ್ಎಸ್ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ