2017ರಲ್ಲಿ ಮಲಯಾಳಂನ ಖ್ಯಾತಿ ನಟಿಯ ಮೇಲೆ ನಡೆದ ಅತ್ಯಾಚಾರ ಯತ್ನ ಪ್ರಕರಣದ ಬಳಿಕ ಹೇಮಾ ಸಮಿತಿಯನ್ನು ಸ್ಥಾಪಿಸಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಹೇಮಾ, ನಿವೃತ್ತ ಐಎಎಸ್ ಅಧಿಕಾರಿ, ಹಿರಿಯ ನಟಿ ಶಾರದಾ ಇನ್ನಿತರರನ್ನು ಈ ಸಮಿತಿ ಒಳಗೊಂಡಿತ್ತು. 2019ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿತ್ತು. ಇದರಲ್ಲಿ ಸಾಕಷ್ಟು ಆಘಾತಕಾರಿ ವಿಚಾರಗಳನ್ನು ಹೇಳಲಾಗಿದೆ ಎಂಬ ವಿಚಾರ ಈಗ ರಿವೀಲ್ ಆಗಿದೆ. ಮಲಯಾಳಂ ಕಲಾವಿದರ ಮೇಲೆ ನಿರಂತರವಾಗಿ ಕಿರುಕುಳ ನಡೆಯುತ್ತಲೇ ಇದೆ ಎಂದು ಸಮಿತಿಯಲ್ಲಿ ಹೇಳಲಾಗಿತ್ತು. ಆದರೆ ಇದನ್ನು ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಪಾರ್ವತಿ ಮೆನನ್ ತಳ್ಳಿ ಹಾಕಿದ್ದಾರೆ.
‘ಜನರು ಹೇಳುವುದಕ್ಕೆ ನನ್ನ ಸಮ್ಮತಿ ಇಲ್ಲ. ಮಲಯಾಳಂ ಇಂಡಸ್ಟ್ರಿ ಒಳಗೆ ತುಂಬಾ ಕೊಳೆತು ಹೋಗಿದೆ ಎಂದು ವರದಿಯಲ್ಲಿ ಇದೆ. ನಾವು ಒಳಗಿನಿಂದ ಚೆನ್ನಾಗಿಯೇ ಇದ್ದೇವೆ. ಹೀಗಾಗಿಯೇ ನಾವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದೇವೆ. ಯಾವುದಾದರೂ ಜಾಗದಿಂದ ಯಾವುದೇ ವಿಚಾರವೂ ಕೇಳುತ್ತಿಲ್ಲ ಎಂದರೆ ಆಗ ನೀವು ಚಿಂತಿಸಬೇಕು’ ಎಂದಿದ್ದಾರೆ.
‘2019ರಲ್ಲಿ ವರದಿ ಸಲ್ಲಿಕೆ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ಈಗ ಸರ್ಕಾರ ವರದಿಯಲ್ಲಿ ಏನಿದೆ ಎಂಬುದನ್ನು ರಿವೀಲ್ ಮಾಡಿದೆ’ ಎಂದು ಅವರು ಹೇಳಿದ್ದಾರೆ.
ವರದಿಯಲ್ಲಿ ಸಾಕಷ್ಟು ವಿಚಾರಗಳನ್ನು ರಿವೀಲ್ ಮಾಡಲಾಗಿದೆ. ಮಲಯಾಳಂ ನಟಿಯರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಅನವಶ್ಯಕವಾಗಿ ಅಡ್ವಾನ್ಸ್ ಹಣ ನೀಡಿ, ಪರೋಕ್ಷವಾಗಿ ಅಡ್ಜಸ್ಟ್ಮೆಂಟ್ ಕೇಳುವುದು ಇಂಡಸ್ಟ್ರಿಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಇನ್ನೂ ಹಲವು ಅಂಶಗಳು ಈ ವರದಿಯಲ್ಲಿವೆ. ಹೇಮಾ ವರದಿ ಪ್ರಕಟವಾದ ಬಳಿಕ ಇದೀಗ ಭಾರತದ ಎಲ್ಲ ಚಿತ್ರರಂಗಗಳಲ್ಲಿಯೂ ಇಂಥಹಾ ಒಂದು ಸಮಿತಿ ರಚನೆಯಾಗಿ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನ ಆಗಬೇಕೆಂಬ ಕೂಗು ಕೇಳಿ ಬರುತ್ತಿದೆ. ಆದರೆ ಅದ್ಯಾವುದು ಇಲ್ಲ ಎಂದು ನಟಿ ಪಾರ್ವತಿ ಮೆನನ್ ಹೇಳಿದ್ದಾರೆ.